ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇದು ತಮಾಷೆಯಲ್ಲ; ಮೊಟ್ಟೆಗಿಂತ ಕೋಳಿಯೇ ಮೊದಲು! (Chicken came before egg | chicken | egg | University of Sheffield)
Bookmark and Share Feedback Print
 
ಕೋಳಿ ಮೊದಲಾ?, ಮೊಟ್ಟೆ ಮೊದಲಾ? -- ಮಾನವರಷ್ಟೇ ಹಳೆಯ ಯಕ್ಷ ಪ್ರಶ್ನೆಯಾಗಿದ್ದ ಇದಕ್ಕೀಗ ಉತ್ತರ ಸಿಕ್ಕಿದೆ. ಕೋಳಿಯೇ ಮೊದಲು, ಮೊಟ್ಟೆ ಏನಿದ್ದರೂ ನಂತರ ಎಂದು ಅತಿರಥ ಮಹಾರಥ ವಿಜ್ಞಾನಿಗಳು ಘೋಷಿಸಿ ಬಿಟ್ಟಿದ್ದಾರೆ.

ಪ್ರಶ್ನೆ ತುಂಬಾ ತಮಾಷೆಯಾಗಿತ್ತು. ಕಳೆದ ಸಾವಿರಾರು ವರ್ಷಗಳಿಂದ ಇಂತಹದ್ದೊಂದು ಪ್ರಶ್ನೆಯನ್ನು ಕೇಳಲಾಗುತ್ತಿತ್ತು. ಅದನ್ನೇ ಗಂಭೀರವಾಗಿ ಪರಿಗಣಿಸಿದ ಬ್ರಿಟನ್‌ನ ಶೆಫೀಲ್ಡ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದ ತಂಡವೊಂದು ಸಂಶೋಧನೆ ನಡೆಸಿ ಸಮಸ್ಯೆ ಬಗೆಹರಿಸಿದೆ.
PR

ಅವರ ಪ್ರಕಾರ ತತ್ತಿಯ ಹೊರ ಕವಚ ರಚನೆಯಲ್ಲಿ ಕೋಳಿಯ ದೇಹದಲ್ಲಿರುವ ಒವಾಕ್ಲೆಡಿನ್ (ಒಸಿ-17) ಎಂದು ಕರೆಯಲ್ಪಡುವ ಪ್ರೊಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಮೊಟ್ಟೆಗಿಂತ ಕೋಳಿಯೇ ಮೊದಲು ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಈ ಒವಾಕ್ಲೆಡಿನ್ ಎಂಬ ಪ್ರೊಟೀನ್ ಉತ್ಪತ್ತಿಯಾಗುವುದು ಗರ್ಭಿಣಿ ಹೇಂಟೆಯ ಅಂಡಾಶಯದಲ್ಲಿ. ಹಾಗಾಗಿ ಕೋಳಿ ಮೊದಲಾ, ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಮೊದಲನೆಯದ್ದಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅದೇ ಹೊತ್ತಿಗೆ ಈ ಪ್ರೊಟೀನ್ ಉತ್ಪತ್ತಿಸುವ ಕೋಳಿ ಮೊದಲು ಹೇಗೆ ಬಂತು ಎಂಬ ಪ್ರಶ್ನೆಗಳಿಗೆ ಸಂಶೋಧನೆ ಉತ್ತರಿಸಿಲ್ಲ ಎಂದು 'ಡೈಲಿ ಎಕ್ಸ್‌ಪ್ರೆಸ್' ತನ್ನ ವರದಿಯಲ್ಲಿ ಹೇಳಿದೆ.

ಮೊಟ್ಟೆಯ ಹೊರ ಕವಚ ರಚನೆಯಲ್ಲಿನ ಅಣು ಸಂಬಂಧದ ವೈಜ್ಞಾನಿಕ ಸಂಶೋಧನೆಗಾಗಿ ವಿಜ್ಞಾನಿಗಳು ಹೆಕ್ಟರ್ ಎಂದು ಕರೆಯಲ್ಪಡುವ ಅತ್ಯಾಧುನಿಕ ಕಂಪ್ಯೂಟರ್ ಬಳಸಿದ್ದರು.

ಈ ಸಂದರ್ಭದಲ್ಲಿ ಪತ್ತೆಯಾದ ವಿಚಾರವೆಂದರೆ ಕೋಳಿಯ ದೇಹದಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟನ್ನು (CaCO3) ಕ್ಯಾಲ್ಸಿಯೇಟ್ ಚೂರುಗಳಾಗಿ ಪರಿವರ್ತನೆ ಮಾಡುವ ಕೆಲಸ ಒಸಿ-17 ಎಂಬ ಪ್ರೊಟೀನ್‌ನಿಂದ ನಡೆಯುತ್ತದೆ ಎಂಬುದು.
ಸಂಬಂಧಿತ ಮಾಹಿತಿ ಹುಡುಕಿ