ಇದೀಗ ಬ್ರಿಟೀಷ್ ಸುಂದರಿಯೊಬ್ಬಳ ಸರದಿ. 16ನೇ ವಯಸ್ಸಿನಲ್ಲೇ ಕನ್ಯತ್ವವನ್ನು ಕಳೆದುಕೊಂಡಿರುವ ನಾನು ಆ ಬಳಿಕ 5,000 ಪುರುಷರೊಂದಿಗೆ ಮಲಗೆದ್ದಿದ್ದೇನೆ ಎಂದು ಹೇಳಿಕೊಂಡು ಸುದ್ದಿಯಲ್ಲಿದ್ದಾಳೆ.
ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ನಾನು ನೈಟ್ ಕ್ಲಬ್ಗಳಲ್ಲಿ, ರಸ್ತೆ ಬದಿಗಳಲ್ಲಿ, ಪಾರ್ಕುಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಮತ್ತು ಡಿಸ್ಕೋ ಥೆಕ್ಗಳಲ್ಲಿ ಸೇರಿದಂತೆ ಹಲವಾರು ಕಡೆ ನಾನು ಸಾಂದರ್ಭಿಕ ಲೈಂಗಿಕ ಸುಖ ಅನುಭವಿಸಿದ್ದೇನೆ ಎಂದು 25ರ ಹರೆಯದ ನಿಕ್ಕಿ ಲೀ ಎಂಬಾಕೆ ಹೇಳಿದ್ದಾಳೆ.
ಅಲ್ಲದೆ ತಾನು ರಜಾದಿನಗಳಲ್ಲಿ ಕ್ಲಬ್ಬುಗಳು, ಬೀಚುಗಳು ಮತ್ತು ಬಾಲ್ಕನಿಗಳಲ್ಲಿ ನಿರಂತರ ಸೆಕ್ಸ್ ಮಾಡುತ್ತಿದ್ದೆ ಎಂದು ಏನೋ ಸಾಧನೆಯನ್ನು ಮಾಡಿದಂತೆ ಕೊಚ್ಚಿಕೊಂಡಿದ್ದಾಳೆ.
ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ, ತಾನು ಪ್ರತಿ ಬಾರಿ ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡದ್ದನ್ನು ಒಂದು ಕೆಂಪು ಪುಸ್ತಕದಲ್ಲಿ ಬರೆದಿಡುವ ಹವ್ಯಾಸವನ್ನು ರೂಢಿಸಿಕೊಂಡು ಬಂದಿದ್ದಾಳಂತೆ.
ಅಲ್ಲದೆ ಸ್ಪೇನ್ನ ಇಬೀಜಾ ಎಂಬಲ್ಲಿನ ರಜಾದಿನದ ತನ್ನ ಸುಖದ ವಿವರವನ್ನೂ ನೀಡಿದ್ದಾಳೆ. ಆ ದಿನ ಒಂದೇ ರಾತ್ರಿ ನಾನು ನಾಲ್ವರು ಪುರುಷರ ಜತೆ ಸೆಕ್ಸ್ ಸುಖ ಅನುಭವಿಸಿದ್ದೆ ಎಂದಿದ್ದಾಳೆ.