ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅತಿ ಅಪಾಯಕಾರಿ ಸಂಘಟನೆಗಳಲ್ಲಿ ಲಷ್ಕರ್: ಅಮೆರಿಕಾ (USA | Pakistan | Lashkar-e-Toiba | Mumbai terror attack)
Bookmark and Share Feedback Print
 
2008ರ ಮುಂಬೈ ದಾಳಿಗೆ ಕಾರಣವಾದ ಲಷ್ಕರ್ ಇ ತೋಯ್ಬಾ ಸೇರಿದಂತೆ ಐದು ಉಗ್ರಗಾಮಿ ಸಂಘಟನೆಗಳನ್ನು ಅತ್ಯಂತಅಪಾಯಕಾರಿ ಗುಂಪಿನಲ್ಲಿ ಸೇರಿಸಿರುವ ಅಮೆರಿಕಾ, ಇವುಗಳು ಜನರ ಒಲವು ಗಿಟ್ಟಿಸಲು ವಿವಿಧ ಕಸರತ್ತುಗಳನ್ನು ನಡೆಸುತ್ತಿವೆ ಎಂದಿದೆ.

ಈ ಪಟ್ಟಿಯಲ್ಲಿ ಅಲ್‌ಖೈದಾ, ಅಫ್ಘಾನ್ ತಾಲಿಬಾನ್, ಪಾಕಿಸ್ತಾನದ ತಾಲಿಬಾನ್, ಕುಖ್ಯಾತ ಹಕಾನಿ ಸಮೂಹ ಮತ್ತು ಲಷ್ಕರ್ ಇ ತೋಯ್ಬಾಗಳನ್ನು ಸೇರಿಸಲಾಗಿದೆ. ಈ ಐದು ಸಂಘಟನೆಗಳು ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಗಳೆಂದು ಅಮೆರಿಕಾ ಹೆಸರಿಸಿದೆ.

ಲಷ್ಕರ್ ಇ ತೋಯ್ಬಾದ ಬಗ್ಗೆ ವಿವರಣೆ ನೀಡಿರುವ ಅಮೆರಿಕಾ, ಈ ಸಂಘಟನೆ ಬಗ್ಗೆ ಅಮೆರಿಕನ್ನರು ಹೆಚ್ಚು ತಲೆ ಕೆಡಿಸಿಕೊಂಡಿರಲಾರರು; ಆದರೆ 2008ರ ನವೆಂಬರ್‌ನಲ್ಲಿ ಮುಂಬೈ ಮೇಲೆ ದಾಳಿ ನಡೆಸಿರುವುದಕ್ಕಾಗಿ ಭಾರತೀಯರು ಅದನ್ನು ಖಂಡಿತಾ ಮರೆಯಲಾರರು ಎಂದು ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ಅಮೆರಿಕಾದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್ಬೂರ್ಕ್ ಹೇಳಿದ್ದಾರೆ.

ಅಮೆರಿಕಾದ ಪ್ರಮುಖ ವೈರಿ ಅಲ್‌ಖೈದಾ. ಇದು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳ ಗಡಿ ಭಾಗಗಳಲ್ಲಿ ನೆಲೆಗಳನ್ನು ಹೊಂದಿದೆ. ಈ ಎಲ್ಲಾ ಸಂಘಟನೆಗಳೂ ಈಗ ಪಾಕಿಸ್ತಾನದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಭಾಗವಾದ ಪ್ರವಾಹ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಸಂತ್ರಸ್ತರಿಗೆ ಸಹಾಯ ಮಾಡುವ ಸೋಗಿನಲ್ಲಿ ಸ್ಥಳೀಯ ಜನರ ಅನುಕಂಪವನ್ನು ಗಿಟ್ಟಿಸಲು ಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಇತರ ದೇಶಗಳು, ಅದರಲ್ಲೂ ಭಾರತ ಮತ್ತು ಚೀನಾಗಳು ಅಫಘಾನಿಸ್ತಾನದ ಕುರಿತು ಶಾಸನಬದ್ಧ ರಕ್ಷಣಾ ಹಿತಾಸಕ್ತಿಗಳನ್ನು ಹೊಂದಿವೆ. ಈ ದೇಶಗಳು ಪಾಕಿಸ್ತಾನದ ಜತೆ ಮುಕ್ತ ಮಾತುಕತೆ ನಡೆಸುತ್ತಿವೆ. ಉಳಿದ ರಾಷ್ಟ್ರಗಳು ಅಮೆರಿಕಾದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ