ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯಾಯಾಧೀಶರಿಗೆ ಕೊಲೆ ಬೆದರಿಕೆ: ಬ್ಲಾಗರ್ ದೋಷಿ (US blogger | judges | Illinois | Hal Turner | New Jersey)
Bookmark and Share Feedback Print
 
ಇಲಿನಾಯ್ಸ್‌ನ ನ್ಯಾಯಾಧೀಶರುಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ವಿಚಾರಣೆಯಲ್ಲಿ ಬಲಪಂಥೀಯ ನ್ಯೂಜೆರ್ಸಿ ಬ್ಲಾಗರ್‌ನೊಬ್ಬನನ್ನು ದೋಷಿ ಎಂದು ತೀರ್ಪು ನೀಡಿದೆ.

ನ್ಯಾಯಾಧೀರುಗಳಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದ ಕುರಿತಂತೆ ಬ್ರೂಕ್ಲೈನ್ ಜೂರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಹಾಲ್ ಟರ್ನರ್‌ ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಟಾರ್ನಿ ನಿರಾಕರಿಸಿದ್ದಾರೆ.

ಚಿಕಾಗೋ, ಓಕ್ ಪಾರ್ಕ್ ಮತ್ತು ಇಲಿನಾಯ್ಸ್‌ನಲ್ಲಿ ಹ್ಯಾಂಡ್ ಗನ್‌ ನಿಷೇಧಿಸಲು ಸಾಧ್ಯವಿಲ್ಲ ಎಂಬ ನಿರ್ಧಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸುವಂತೆ ಜಿಲ್ಲಾ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಮೆರಿಕದ ಸರ್ಕ್ಯೂಟ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಧೀಶರಾದ ವಿಲಿಯಂ, ಫ್ರಾಂಕ್ ಈಸ್ಟರ್‌ಬ್ರೂಕ್ ಮತ್ತು ರಿಚರ್ಡ್ ಪೋಸ್ನರ್ ಜಿಲ್ಲಾ ಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದ್ದರು.

ಆದರೆ ನ್ಯಾಯಾಧೀಶರು ನೀಡಿದ ತೀರ್ಪಿನ ದಿನದಂದೇ ಟರ್ನರ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ಬ್ಲಾಗ್‌ನಲ್ಲಿ ಲೇಖನ ಬರೆದಿದ್ದ. ಇಂತಹ ತೀರ್ಪು ನೀಡಿರುವ ನ್ಯಾಯಾಧೀಶರು ಸಾಯಲೇಬೇಕು ಎಂದು ಉಲ್ಲೇಖಿಸಿದ್ದ. ಇದು ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಿ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ಪ್ರಕರಣದಲ್ಲಿ ದೋಷಿ ಎಂದ ಸಾಬೀತಾಗಿರುವ ಟರ್ನರ್ ಕನಿಷ್ಠ ಹತ್ತು ವರ್ಷಗಳ ಕಾಲ ಜೈಲುಶಿಕ್ಷೆ ಆಗುವ ಸಾಧ್ಯತೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ