ಅಲ್ ಖಾಯಿದಾದ ಭಯೋತ್ಪಾದನಾ ದಾಳಿಗೆ ತುತ್ತಾದ ವಿಶ್ವ ವಾಣಿಜ್ಯ ಕಟ್ಟಡದ (ಡಬ್ಲ್ಯುಟಿಸಿ) ಸ್ಥಳದಲ್ಲಿ ಮಸೀದಿ ನಿರ್ಮಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬೆಂಬಲ ಸೂಚಿಸಿದ್ದಾರೆ.
ಉಗ್ರರು ಹೊಡೆದು ಉರುಳಿಸಿದ್ದ ಡಬ್ಲ್ಯೂಟಿಸಿ ಸ್ಥಳದಲ್ಲಿ ಮಸೀದಿ ಕಟ್ಟುವುದಕ್ಕೆ ನನ್ನ ಬೆಂಬಲವಿದೆ. ಎಲ್ಲಾ ಜನಾಂಗದವರು ತಮ್ಮದೆಯಾದ ಹಕ್ಕು ಹೊಂದಿದ್ದಾರೆ. ಇದಕ್ಕೆ ಮುಸ್ಲಿಮ್ ಸಮುದಾಯ ಕೂಡ ಹೊರತಲ್ಲ ಎಂದರು.
ಅಮೆರಿಕದ ಕಾನೂನಿಗೆ ಬದ್ದವಾಗಿ ಮಸೀದಿ ನಿರ್ಮಿಸಲು ನನ್ನ ಅಭ್ಯಂತರವಿಲ್ಲ ಎಂದು ಶ್ವೇತಭವನದಲ್ಲಿ ಏರ್ಪಡಿಸಿದ್ದ ಇಫ್ತಿಯಾರ್ ಕೂಟದ ವೇಳೆ ತಿಳಿಸಿದ್ದಾರೆ. ಅಮೆರಿಕದ ವಿರುದ್ಧ ಈಗಲೂ ಅಲ್ ಖಾಯಿದಾ ಕತ್ತಿಮಸೆಯುತ್ತಿದ್ದರೆ, ಮತ್ತೊಂದೆಡೆ ಧರೆಗುರುಳಿದ ವಿಶ್ವ ವಾಣಿಜ್ಯ ಕಟ್ಟಡದ ಸ್ಥಳದಲ್ಲಿ ಮಸೀದಿ ಕಟ್ಟಡಲು ತನ್ನ ಬೆಂಬಲ ಇದೆ ಎನ್ನುವ ಮೂಲಕ ಒಬಾಮಾ ಅಚ್ಚರಿ ಹುಟ್ಟಿಸಿದ್ದಾರೆ.