ಶ್ರೀಲಂಕಾ ಸೇನೆಯ ಮಾಜಿ ಮುಖ್ಯಸ್ಥ ಹಾಗೂ ಎಲ್ಟಿಟಿಇ ವಿರುದ್ಧದ ಹೋರಾಟದ ಹೀರೋ ಸರತ್ ಫೋನ್ಸೆಕಾ ಅವರು ಸೇವಾವಧಿಯಲ್ಲಿ ಪಡೆದಿದ್ದ ದರ್ಜೆ, ಪದಕ, ಬಿರುದು ಮತ್ತು ಪಿಂಚಣಿ ಸೌಲಭ್ಯಗಳನ್ನೆಲ್ಲಾ ಹಿಂಪಡೆಯಲು ಮಿಲಿಟರಿ ಕೋರ್ಟ್ ನೀಡಿದ್ದ ಆದೇಶಕ್ಕೆ ರಾಷ್ಟ್ರಾಧ್ಯಕ್ಷ ಮಹೀಂದಾ ರಾಜಪಕ್ಸೆ ಅವರು ಒಪ್ಪಿಗೆ ಮುದ್ರೆ ಹಾಕಿದ್ದಾರೆ.