ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಜಿಬುರ್ ಹಂತಕರನ್ನು ನಮಗೊಪ್ಪಿಸಿ: ಭಾರತಕ್ಕೆ ಬಾಂಗ್ಲಾ (Bangladesh | Mujib killers | Dhaka | India | Sheikh Hasina)
Bookmark and Share Feedback Print
 
ಬಾಂಗ್ಲಾದೇಶ ಸಂಸ್ಥಾಪಕ ಮುಖಂಡ ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈದಿರುವ ಹಂತಕರು ಭಾರತದಲ್ಲಿ ಅಡಗಿಕೊಂಡಿದ್ದು, ಅವರನ್ನು ಶೀಘ್ರವೇ ಬಂಧಿಸಿ ಹಸ್ತಾಂತರಿಸಬೇಕೆಂದು ಬಾಂಗ್ಲಾದೇಶ ಸರಕಾರ ಮನವಿ ಮಾಡಿಕೊಂಡಿದೆ.

ರೆಹಮಾನ್ ಹಂತಕರಲ್ಲಿ ಇಬ್ಬರಾದ ಮಾಜಿ ಕ್ಯಾಪ್ಟನ್ ಅಬ್ದುಲ್ ಮಜಿದ್ ಮತ್ತು ರಿಸಲ್ದಾರ್ ಮೋಸ್ಲೆಹುದ್ದೀನ್ ಭಾರತದಲ್ಲಿಯೇ ಅಡಗಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಭಾರತಕ್ಕೆ ಪತ್ರಮುಖೇನ ಕೋರಿಕೆ ಸಲ್ಲಿಸಿದೆ.

ಆ ನಿಟ್ಟಿನಲ್ಲಿ ಮುಜಿಬುರ್ ರೆಹಮಾನ್ ಹಂತಕರ ಸೆರೆಗೆ ನಾವು ಭಾರತದ ನೆರವು ಕೇಳಿದ್ದು, ಕೂಡಲೇ ಅವರನ್ನು ಬಂಧಿಸಬೇಕು. ನಿಜಕ್ಕೂ ಅವರು ಭಾರತದಲ್ಲಿಯೇ ಅಡಗಿಕೊಂಡಿದ್ದರೆ ಅವರನ್ನು ಬಂಧಿಸಿ ಬಾಂಗ್ಲಾಕ್ಕೆ ಒಪ್ಪಿಸುವಂತೆ ಗೃಹ ಸಚಿವ ಸಾಹಾರಾ ಖಾತುನ್ ತಿಳಿಸಿದ್ದಾರೆ.

1975 ಆಗೋಸ್ಟ್ 15ರಂದು ಮುಜಿಬುರ್ ರೆಹಮಾನ್ ಸೇರಿದಂತೆ ಅವರ ಕುಟುಂಬದ ಬಹುತೇಕರನ್ನು ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಟ್ವೆಲ್‌ವೆ ಬಾಂಗ್ಲಾದೇಶ್ ಆರ್ಮಿ ಅಧಿಕಾರಿ ಪ್ರಮುಖ ಆರೋಪಿಯಾಗಿದ್ದ. ಅಲ್ಲದೇ 12 ಮಂದಿ ಆರೋಪಿಗಳಲ್ಲಿ ಐದು ಮಂದಿಗೆ ಈಗಾಗಲೇ ಮರಣದಂಡನೆ ಶಿಕ್ಷೆ ನೀಡಲಾಗಿದೆ. ಒರ್ವ ಆರೋಪಿ ಸಾವನ್ನಪ್ಪಿದ್ದು, ಉಳಿದ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ