ಮನೆ ದರೋಡೆ, ವಾಹನ ಕಳವು ಮಾಡುವುದನ್ನು ಕೇಳಿದ್ದೇವೆ. ಆದರೆ ಕಾರಕಾಸ್ನ ಹ್ಯಾಂಗರ್ ಮೈಕ್ವೆಟಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನವನ್ನೇ ಅಪಹರಿಸಿರುವ ಘಟನೆಯೊಂದು ವರದಿಯಾಗಿದೆ.
ವಿಮಾನ ಯಾವ ಪ್ರದೇಶದತ್ತ ಕೊಂಡೊಯ್ದಿದ್ದಾರೆಂಬುದನ್ನು ಕಂಟ್ರೋಲ್ ಟವರ್ನಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದಕ ದ್ರವ್ಯ ಕಳ್ಳಸಾಗಾಣೆದಾರರು ಈ ವಿಮಾನವನ್ನು ಅಪಹರಿಸಿರುವ ಶಂಕೆ ಇರುವುದಾಗಿ ಪೊಲೀಸರು ಹೇಳಿದ್ದಾರೆ.
ಕಳ್ಳತನವಾದ ವಿಮಾನ ಅಗ್ರಿಬ್ಯುಸಿನೆಸ್ ಸಂಸ್ಥೆಯದ್ದಾಗಿದೆ. ವಿಮಾನವನ್ನು ಶುಕ್ರವಾರ ತಡರಾತ್ರಿ ಅಥವಾ ಶನಿವಾರ ಮುಂಜಾನೆ ಅಪಹರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಕ್ರಿಮಿನಲ್ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ವಿಮಾನವನ್ನು ಯಾವ ರೀತಿಯಲ್ಲಿ ಅಪಹರಿಸಿದ್ದಾರೆಂಬುದು ತಮಗೆ ತಿಳಿಯಲಿಲ್ಲ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವುದನ್ನು ತಾವು ಗಮನಿಸಿರುವುದಾಗಿಯೂ ವಿವರಣೆ ನೀಡಿದ್ದಾರೆ.