ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ 'ವಾರ್ ಹೀರೋ' ಫೋನ್ಸೆಕಾಗೆ ಜೈಲುಶಿಕ್ಷೆ ಭೀತಿ (Sri Lanka | war hero | jail term | Fonseka | Rajapakse | court martial,)
ಕೋರ್ಟ್ ಮಾರ್ಷಲ್‌ನಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರಕಾರ ತನ್ನನ್ನು ಜೈಲು ಕಂಬಿಯ ಹಿಂದೆ ತಳ್ಳಲು ಯತ್ನಿಸುತ್ತಿದೆ ಎಂದು ಶ್ರೀಲಂಕಾ ಮಿಲಿಟರಿಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಆರೋಪಿಸಿದ್ದಾರೆ.
ಸುಮಾರು 37 ವರ್ಷಗಳ ಕಾಲ ಎಲ್‌ಟಿಟಿಇ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸಿ, ಕೊನೆಗೂ ಕಳೆದ ವರ್ಷ ಶ್ರೀಲಂಕಾ ಸರಕಾರದ ಮಿಲಿಟರಿಯ ಮಾಡು ಇಲ್ಲ ಮಡಿ ಎಂಬ ಹೋರಾಟದಲ್ಲಿ ಎಲ್‌ಟಿಟಿಇಯನ್ನು ಮಣಿಸಿತ್ತು. ಈ ಹೋರಾಟದಲ್ಲ ಮಿಲಿಟರಿಯ ನೇತೃತ್ವವನ್ನು ಫೋನ್ಸೆಕಾ ವಹಿಸಿದ್ದರು.
ಆದರೆ ಇದೀಗ ಜನವರಿ ತಿಂಗಳಿನಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆ ವಿರುದ್ಧ ಸ್ಪರ್ಧಿಸಿದ್ದಕ್ಕೆ ಶ್ರೀಲಂಕಾ ಸರಕಾರ ಪ್ರತಿಕಾರ ತೀರಿಸಿಕೊಳ್ಳುತ್ತಿದೆ ಎಂದು ಫೋನ್ಸೆಕಾ ಆರೋಪಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷಗಾದಿಗಾಗಿ ನಡೆದ ಮರು ಚುನಾವಣೆಯಲ್ಲಿ ರಾಜಪಕ್ಸೆ ಗೆಲುವು ಸಾಧಿಸಿದ ಎರಡು ವಾರಗಳ ನಂತರ ಪೋನ್ಸೆಕಾ ಅವರನ್ನು ಬಂಧಿಸಲಾಗಿತ್ತು.
ಮಿಲಿಟರಿಯಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ರಾಜಕೀಯ ಚದುರಂಗದಾಟ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಫೋನ್ಸೆಕಾ ಅವರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗಿತ್ತು. ಕಳೆದ ಶುಕ್ರವಾರ ಫೋನ್ಸೆಕಾ ಅವರನ್ನು ದೋಷಿ ಎಂದು ಮಿಲಿಟರಿ ಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ, ಫೋನ್ಸೆಕಾ ಅವರ ಹುದ್ದೆ, ಗೌರವ, ಪದಕಗಳನ್ನು ವಾಪಸ್ ಕೊಡುವಂತೆಯೂ ಫೋನ್ಸೆಕಾಗೆ ಕೋರ್ಟ್ ಆದೇಶಿಸಿತ್ತು.
ಶ್ರೀಲಂಕಾ ಸರಕಾರ ನನ್ನನ್ನು ಜೈಲಿಗೆ ಹಾಕಲು ಸಿದ್ದತೆ ನಡೆಸಿದ್ದಾರೆ. ಆದರೆ ನಾನು ಅದಕ್ಕೆ ತಯಾರಾಗಿದ್ದೇನೆ ಎಂದು ಮಿಲಿಟರಿ ಬೆಂಗಾವಲಿನೊಂದಿಗೆ ಅಸೆಂಬ್ಲಿ ಕಲಾಪಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಫೋನ್ಸೆಕಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮಿಲಿಟರಿ ಕೋರ್ಟ್ ನೀಡಿರುವ ತೀರ್ಪಿನಲ್ಲಿ ತನಗೆ ಅಸಮಾಧಾನ ಇದ್ದು, ಆ ಕಾರಣಕ್ಕಾಗಿ ತಾನು ಕೋರ್ಟ್ ಮಾರ್ಷಲ್ ವಿರುದ್ದ ಸಿವಿಲ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.