ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಜಲಾಂತರ್ಗಾಮಿ ಪ್ರಾಯೋಗಿಕ ಪರೀಕ್ಷೆ ಆರಂಭ (India | Russia | nuclear-powered submarine | INS Chakra)
Bookmark and Share Feedback Print
 
ಭಾರತಕ್ಕೆ ಹತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗುತ್ತಿರುವ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿ ನೌಕೆಯ ಪ್ರಾಯೋಗಿಕ ಪರೀಕ್ಷೆ ಮತ್ತು ಅದಕ್ಕಾಗಿನ ಭಾರತೀಯ ಸಿಬ್ಬಂದಿಗಳ ತಂಡಕ್ಕೆ ತರಬೇತಿಯನ್ನು ಸಾಗರದಾಳದಲ್ಲಿ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.

ಅಕುಲಾ-II ಸಾಲಿನ ನೌಕೆ ಈಗಾಗಲೇ ಭಾರತದತ್ತ ಪ್ರಯಾಣ ಆರಂಭಿಸಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ರಷ್ಯಾ, ಈ ನೌಕೆಯನ್ನು ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದಿದ್ದಾರೆ.

ಐಎನ್ಎಸ್ ಚಕ್ರ ಎಂದು ಹೆಸರಿಸಲಾಗುವ ಜಲಾಂತರ್ಗಾಮಿ ನೌಕೆಯನ್ನು ರಷ್ಯಾವು ಭಾರತಕ್ಕೆ 10 ವರ್ಷಗಳ ಗುತ್ತಿಗೆ ಆಧಾರದಲ್ಲಿ ಇದೇ ವರ್ಷ ಹಸ್ತಾಂತರಿಸಲಿದೆ ಎಂದು ಜೂನ್ ತಿಂಗಳಲ್ಲಿ ರಷ್ಯಾದ ಮಿಲಿಟರಿ-ತಾಂತ್ರಿಕ ಸಹಕಾರ ಫೆಡರಲ್ ಸರ್ವಿಸ್ ಮುಖ್ಯಸ್ಥ ಮೈಕೆಲ್ ಡಿಮಿಟ್ರಿವ್ ಖಚಿತಪಡಿಸಿದ್ದರು.

2004ರ ಜನವರಿಯಲ್ಲಿ ನವದೆಹಲಿ ಮತ್ತು ಮಾಸ್ಕೋ ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಹಾಕಿದ ನಂತರ ಭಾರತವೂ ಆರ್ಥಿಕ ಸಹಕಾರ ನೀಡಿದ ನಂತರ ರಷ್ಯಾ ಈ ಅಣ್ವಸ್ತ್ರಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸಲು ತೊಡಗಿತ್ತು.

ಆರಂಭಿಕ ಒಪ್ಪಂದಗಳ ಪ್ರಕಾರ 2008ರ ಮಧ್ಯದಲ್ಲೇ ಭಾರತೀಯ ನೌಕಾ ಪಡೆಗೆ ಈ ಜಲಾಂತರ್ಗಾಮಿಯನ್ನು ಒಪ್ಪಿಸಬೇಕಿತ್ತು. ಆದರೆ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಹಸ್ತಾಂತರ ವಿಳಂಬವಾಗಿತ್ತು.

2008ರ ನವೆಂಬರ್ ತಿಂಗಳಲ್ಲಿ ಸಾಗರದಾಳದಲ್ಲಿ ಈ ನೌಕೆಯನ್ನು ಪರಿಶೀಲನೆಗೊಳಪಡಿಸಿದಾಗ ತಾಂತ್ರಿಕ ದೋಷದಿಂದ ವಿಷಾನಿಲ ಸೋರಿಕೆಗೊಂಡು 20 ನಾವಿಕರು ಮತ್ತು ತಾಂತ್ರಿಕ ತಜ್ಞರು ಕೊಲ್ಲಲ್ಪಟ್ಟಿದ್ದರು.
ಸಂಬಂಧಿತ ಮಾಹಿತಿ ಹುಡುಕಿ