ಭೀಕರ ಪ್ರವಾಹದಿಂದಾಗಿ ಸಂತ್ರಸ್ತರಾದ ಜನರ ನೆರವಿಗಾಗಿ ಇನ್ನಷ್ಟು ನೆರವು ನೀಡಲು ಭಾರತ ಸಿದ್ಧವಿರುವುದಾಗಿ ತಿಳಿಸಿದೆ. ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಜತೆ ಮಾತುಕತೆ ನಡೆಸಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಹೆಚ್ಚಿನ ನೆರವಿನ ಭರವಸೆ ನೀಡಿದ್ದಾರೆ.
ಆರಂಭದಲ್ಲಿ ಭಾರತದ ನೆರವಿನ ಪ್ರಸ್ತಾಪವನ್ನು ನಿರಾಕರಿಸಿದ್ದ ಪಾಕ್, ನಂತರ 50 ದಶಲಕ್ಷ ಡಾಲರ್ ಪರಿಹಾರವನ್ನು ಸ್ವೀಕರಿಸಿತ್ತು. ಭಾರತದ ಪರಿಹಾರ ನೆರವು ಸ್ವೀಕರಿಸಲು ಪಾಕ್ ಸಮ್ಮತಿಸಿರುವುದನ್ನು ಭಾರತ ಸ್ವಾಗತಿಸಿದೆ.
ಹೆಚ್ಚಿನ ಹಣಕಾಸಿನ ನೆರವಿಗೆ ಸಂಬಂಧಪಟ್ಟಂತೆ ಭಾರತ ಪ್ರಧಾನಿ ಸಿಂಗ್, ಪಾಕ್ ಪ್ರಧಾನಿ ಗಿಲಾನಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ತಿಳಿಸಿದ್ದಾರೆ. ಆ ಮೂಲಕ ಪಾಕ್ ಜತೆಗಿನ ಸೌಹಾರ್ದ ಬಲಗೊಳಿಸಲು ಭಾರತ ಮುಂದಾಗಿದೆ.
ಮೂಲಗಳ ಪ್ರಕಾರ ಪಾಕ್‌ನ 1/5 ಭಾಗ ಇದೀಗಲೇ ಭೀಕರ ಪ್ರವಾಹಕ್ಕೆ ತತ್ತರಿಸಿದೆ. ಇದು ಕಳೆದ 80 ವರ್ಷದಲ್ಲೇ ರಾಷ್ಟ್ರ ಕಂಡ ಅತೀ ದೊಡ್ಡ ವಿಪತ್ತಾಗಿದೆ. ದುರಂತದಲ್ಲಿ 1,700ಕ್ಕಿಂತಲೂ ಹೆಚ್ಚು ಮಂದಿ ಸಾವೀಗೀಡಾಗಿದ್ದು, 6,50,000 ಮಂದಿ ಬೀದಿಪಾಲಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿವೆ.