ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಟ್ಲರ್ ಪೂರ್ವಿಕರು ಯೆಹೂದಿಗಳು, ಆಫ್ರಿಕನ್ನರು: ಡಿಎನ್ಎ ಟೆಸ್ಟ್ (Adolf Hitler | Jewish | African ancestors | DNA tests)
Bookmark and Share Feedback Print
 
ನಾಜಿ ನಾಯಕ ಅಡಾಲ್ಫ್ ಹಿಟ್ಲರ್ ಯೆಹೂದಿಗಳು ಮತ್ತು ಆಫ್ರಿಕನ್ ಸಮುದಾಯದ ಪೂರ್ವಿಕರನ್ನು ಹೊಂದಿದ್ದ ಸಾಧ್ಯತೆಗಳಿವೆ ಎಂದು ನೂತನ ಡಿಎನ್‌ಎ ಪರೀಕ್ಷೆಯೊಂದು ಬಹಿರಂಗಪಡಿಸಿದೆ.

ಹಿಟ್ಲರ್ ಸಂಬಂಧಿಕರ ಮಾದರಿಗಳನ್ನು ಡಿಎನ್ಎ ಪರೀಕ್ಷೆಗೊಳಪಡಿಸಿದಾಗ, ಅದು ಯೆಹೂದಿಗಳು ಮತ್ತು ಉತ್ತರ ಆಫ್ರಿಕಾದ ಸಮುದಾಯಗಳಿಗೆ ಸಂಬಂಧ ಕಲ್ಪಿಸಿದೆ ಎಂದು 'ಡೈಲೀ ಎಕ್ಸ್‌ಪ್ರೆಸ್' ಮಂಗಳವಾರ ವರದಿ ಮಾಡಿದೆ.

ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಹಿಟ್ಲರ್ ಹಿರಿಯ ಸೋದರಳಿಯ ಅಲೆಕ್ಸಾಂಡರ್ ಸ್ಟುವರ್ಟ್ ಹೌಸ್ಟನ್ (ಈಗ 61 ವರ್ಷ) ಬಳಸಿದ್ದ ಕರವಸ್ತ್ರವೊಂದನ್ನು ಎಸೆದಾಗ ಅದನ್ನು ಪಡೆಯುವಲ್ಲಿ ಯಶಸ್ವಿಯಾದ ಜೀನ್-ಪೌಲ್ ಮಲ್ಡರ್ಸ್ ಎಂಬ ಪತ್ರಕರ್ತನಿಂದಾಗಿ ಈ ಡಿಎನ್ಎ ಪರೀಕ್ಷೆ ನಡೆದಿದೆ.

ಈ ಪುಟ್ಟ ಕರವಸ್ತ್ರವನ್ನು ಊಟ ಮಾಡುವಾಗ ದಿರಿಸನ್ನು ರಕ್ಷಿಸಲೆಂದು, ಬಾಯಿ ಮತ್ತು ಕೈಗಳನ್ನು ಒರೆಸಲೆಂದು ಹೌಸ್ಟನ್ ಬಳಸುತ್ತಿದ್ದರು ಎಂದು ವರದಿಗಳು ಹೇಳಿವೆ.

ಮಲ್ಡರ್ಸ್ ಅವರಿಗೆ ಎರಡನೇ ಮಾದರಿ ಪಡೆಯಲು ಸಾಧ್ಯವಾಗಿರುವುದು ಹಿಟ್ಲರ್ ಅವರ ಆಸ್ಟ್ರಿಯಾ ಕಸಿನ್, ರೈತನಾಗಿರುವ ನಾಬರ್ಟ್ ಎಚ್. ಅವರಿಂದ. ಈ ಡಿಎನ್ಎ ಪರೀಕ್ಷಾ ವರದಿಗಳು ಆಶ್ಚರ್ಯಕರ ಫಲಿತಾಂಶಗಳನ್ನು ಒದಗಿಸಿದ್ದವು.

ಜರ್ಮನಿ ಮತ್ತು ಪಾಶ್ಚಾತ್ಯ ಯೂರೋಪ್‌ಗಳಲ್ಲಿ ಅಪರೂಪವಾಗಿರುವ, ಆದರೆ ಯೆಹೂದ್ಯರು ಮತ್ತು ಉತ್ತರ ಆಫ್ರಿಕಾ ಸಮುದಾಯಗಳಲ್ಲಿ ಸಾಮಾನ್ಯವಾಗಿರುವ 'ವೈ' ವರ್ಣತಂತುವಿನ ಒಂದು ಪ್ರಕಾರ ಈ ಪರೀಕ್ಷೆಯಲ್ಲಿ ಹಿಟ್ಲರ್ ಸಂತತಿಯವರಲ್ಲಿ ಪತ್ತೆಯಾಗಿದೆ.

ಡಿಎನ್ಎ ಪರೀಕ್ಷೆಯಲ್ಲಿ ಇಂತಹ ಅಂಶಗಳು ಬಹಿರಂಗವಾಗುವುದರೊಂದಿಗೆ ಜರ್ಮನಿಯಲ್ಲಿ ಹಿಟ್ಲರ್‌ನ ವಲಸೆ ಬಂದಿರುವ ಸಂಬಂಧಿಕರು ನೆಲೆಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ