ಮೆಲ್ಬೊರ್ನ್ ಯೂನಿರ್ವಸಿಟಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಭಾರತೀಯ ಪ್ರಜೆಯೊಬ್ಬನಿಗೆ ಇಲ್ಲಿನ ನ್ಯಾಯಾಲಯ ಬುಧವಾರ 13 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಕಳೆದ ವರ್ಷ 21ರ ಹರೆಯದ ಹರ್ಜೋತ್ ಹುಂಡಲ್ ಸಿಂಗ್ ಎಂಬಾತ ವಿದ್ಯಾರ್ಥಿನಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬಲವಂತದಿಂದ ವ್ಯಾನ್ನೊಳಕ್ಕೆ ತುಂಬಿಸಿಕೊಂಡು ಆಕೆಯ ಕೈಗಳನ್ನು ಕಟ್ಟಿ ಹಾಕಿ, ಕಿರುಚಾಡಿದರೆ ನಿನ್ನ ಕೊಂದು ಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಎಎಪಿ ವರದಿ ತಿಳಿಸಿದೆ.
ವ್ಯಾನ್ನೊಳಕ್ಕೆ ವಿದ್ಯಾರ್ಥಿನಿಯನ್ನು ಎಳೆದುಕೊಂಡ ಕೂಡಲೇ ಆಕೆಯ ಪ್ಯಾಂಟ್ಸ್ ಅನ್ನು ಕಳಚಿಹಾಕಿದ್ದ. ಸ್ವಲ್ಪ ದೂರದವರೆಗೆ ಕಾರನ್ನು ಚಲಾಯಿಸಿಕೊಂಡು ಹೋದ ಸಿಂಗ್, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಘಟನೆ ನಡೆದು ಕೆಲವು ದಿನಗಳ ನಂತರ ಸಿಂಗ್ ದೆಹಲಿಗೆ ತೆರಳಲು ಸಜ್ಜಾಗಿದ್ದ ವೇಳೆ ಮೆಲ್ಬೊರ್ನ್ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಕ್ಟೋರಿಯನ್ ಕೌಂಟಿ ಕೋರ್ಟ್ ನ್ಯಾಯಾಧೀಶರಾದ ಮಾರ್ಲಿಯನ್ ಹರ್ಬಿಸನ್, ಆರೋಪಿ ಸಿಂಗ್ಗೆ 13 ವರ್ಷಗಳ ಜೈಲುಶಿಕ್ಷೆ ವಿಧಿಸಿದರು.