ಪಾಕ್ ವ್ಯಕ್ತಿ ನಿರ್ದೋಷಿ
ಬೋಸ್ಟನ್: ಟೈಮ್ಸ್ ಸ್ಕ್ವೇರ್ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಬಿಡುಗಡೆ ಮಾಡುವಂತೆ ಅಮೆರಿಕಾ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ವಲಸೆ ನೀತಿಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಆತನನ್ನು ಶಂಕೆಯ ಮೇಲೆ ವಶದಲ್ಲಿಟ್ಟುಕೊಳ್ಳಲಾಗಿದ್ದರೂ, ಅದನ್ನು ನಿರೂಪಿಸಲು ವಕೀಲರು ವಿಫಲರಾಗಿದ್ದರು.