ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೈಕೊಟ್ಟ ಪಾಕ್ ಪ್ರಿಯತಮ: ಬ್ರಿಟನ್ ವೈದ್ಯೆ ಆತ್ಮಹತ್ಯೆಗೆ ಶರಣು (Pakistan | British doctor | Jawad Usman | Jennifer Suraweera | lover weds)
Bookmark and Share Feedback Print
 
'ತಾನು ಪ್ರೀತಿಸಿದ ಪಾಕಿಸ್ತಾನಿ ಗೆಳೆಯ ಪಾಕ್‌ನಲ್ಲಿಯೇ ಮದುವೆಯಾದ ವಿಷಯ ತಿಳಿದ ಬ್ರಿಟನ್‌ನಲ್ಲಿರುವ ಪ್ರಿಯತಮೆ, ಕಿರಿಯ ವೈದ್ಯೆಯೊಬ್ಬಳು ಆಘಾತಗೊಂಡು ಅತೀಯಾದ ಮಾದಕ ದ್ರವ್ಯದ ಚುಚ್ಚುಮದ್ದಿನಿಂದ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಪಾಕಿಸ್ತಾನದ ಜಾವದ್ ಉಸ್ಮಾನ್ ಎಂಬಾತನನ್ನು ಕಿರಿಯ ವೈದ್ಯೆ ಜೆನ್ನಿಫರ್ ಸುರಾವೀರಾ (26) ಪ್ರೀತಿಸುತ್ತಿದ್ದಳು. ಅಲ್ಲದೇ ಮದುವೆಯಾಗಲು ಆತನೊಂದಿಗೆ ಮಾತುಕತೆ ನಡೆಸಿದ್ದಳು. ಆದರೆ ಉಸ್ಮಾನ್ ಪಾಕಿಸ್ತಾನಕ್ಕೆ ಬಂದು ವಿವಾಹವಾದ ವಿಷಯ ಕೇಳಿದ ನಂತರ ಆಘಾತಗೊಂಡ ಮಾರಣಾಂತಿಕ ಮಾದಕ ದ್ರವ್ಯವನ್ನು ಅತಿಯಾಗಿ ದೇಹಕ್ಕೆ ಚುಚ್ಚಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

ಜೆನ್ನಿಫರ್ ಸಹೋದರ ರಾಜ್ ಅವರು ಆಕೆಯ ಪ್ಲ್ಯಾಟ್‌ಗೆ ಬಂದು ಕರೆದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾಗಿತ್ತು. ನಂತರ ಒಳಹೋಗಿ ನೋಡಿದಾಗ ಆಕೆ ಸಾವನ್ನಪ್ಪಿರುವುದು ಕಂಡುಬಂದಿತ್ತು ಎಂದು ನ್ಯಾಯಾಲಯದ ವಿಚಾರಣೆ ವೇಳೆ ತಿಳಿಸಿದ್ದಾರೆ.

ಆಕೆ ಮಾರಣಾಂತಿಕವಾದ ಬೇಟಾ ಬ್ಲೋಕೆರ್ ಪ್ರೋಪಾನಾಲೋಲ್ ಎಂಬ ಡ್ರಗ್ಸ್ ಅನ್ನು ಸೇವಿಸಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಿರುವುದಾಗಿ ಡೈಲಿ ಮೇಲ್ ವರದಿ ವಿವರಿಸಿದೆ.

ಆಕೆಯ ಸಹೋದರ ರಾಜ್ ಸುರಾವೀರಾ ಕೂಡ ಕಿರಿಯ ತರಬೇತು ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನನಗೆ ಆಘಾತ ತಂದಿತ್ತು. ಬಹುಶಃ ಉಸ್ಮಾನ್ ಪಾಕಿಸ್ತಾನದಿಂದ ಕರೆ ಮಾಡಿ ಆಕೆಗೆ ಪಾಕ್‌ಗೆ ಬರಲು ತಿಳಿಸಿರಬೇಕು. ಹಾಗಾಗಿ ಅವಳು ತುಂಬಾ ಒತ್ತಡಕ್ಕೆ ಒಳಗಾಗಿದ್ದವಳಂತೆ ಕಂಡು ಬಂದಿದ್ದಳು. ಆದರೆ ಆಕೆ ಯಾವುದೇ ವಿಷಯ ತನಗೆ ಹೇಳುತ್ತಿರಲಿಲ್ಲ ಎಂದು ರಾಜ್ ತಿಳಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ