ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೊಂದು ವಿಸ್ಮಯ: ಕಡಲಾಳದಲ್ಲಿ ಹೊಸ ಜೀವವೈವಿಧ್ಯ ಪತ್ತೆ! (Indonesia | Sea | Under Water Adventure)
Bookmark and Share Feedback Print
 
ಇನ್ನೊಂದು ಸೌರಮಂಡಲವಿರುವುದನ್ನು ಪತ್ತೆ ಹಚ್ಚಿರುವ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಾಧನೆಯ ಬೆನ್ನಲ್ಲೇ ಇದೀಗ ಇಂಡೋನೇಷ್ಯಾದ ವಿಜ್ಞಾನಿಗಳು ಕಡಲಾಳದಲ್ಲಿ ಈವರೆಗೆ ಕಂಡು ಕೇಳರಿಯರ ಅಪರೂಪದ ಜೀವವೈವಿಧ್ಯಗಳನ್ನು ಪತ್ತೆ ಮಾಡಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇಂಡೋನೇಷ್ಯಾದ ಕಡಲಾಳವನ್ನು ಸಂಶೋಧಿಸಿರುವ ಮೂಲಕ ಬೃಹತ್ ಸಮುದ್ರ ಜೇಡಗಳು, ಗಾಜಿನ ಸೂಜಿಯಂತಹ ಅಪರೂಪದ ಕೀಟಗಳು, ಹೂವಿನಂತಹ ಮೃದು ಮೆದುವಾದ ಸ್ಪಂಜು ಹುಳಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಮೂರು ವಾರಗಳ ಕಾಲ ನಡೆದ ಜಲ ಯಾತ್ರೆಯಲ್ಲಿ ಅತ್ಯಾಧುನಿಕ ಕ್ಯಾಮರಾಗಳನ್ನು ಒಳಗೊಂಡ ರೊಬೋಟ್ ವಾಹನಗಳನ್ನು ಬಳಸಿ ನಡೆಸಿದ ಸಂಶೋಧನೆಯಲ್ಲಿ ಸುಮಾರು 40 ಬಗೆಯ ಹೊಸ ಸಸ್ಯ ಹಾಗೂ ಪ್ರಾಣಿ ಪ್ರಬೇಧಗಳೂ ಪತ್ತೆಯಾಗಿವೆ. 100 ಗಂಟೆಗಳಿಗೂ ಹೆಚ್ಚು ಕಾಲ ವಿಡಿಯೋ ಚಿತ್ರೀಕರಿಸಲಾಗಿದ್ದು ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಫೋಟೋಗಳನ್ನು ತೆಗೆಯಲಾಗಿದೆ. ಇದಕ್ಕೆ ಇಂಡೋನೇಷ್ಯಾ ಹಾಗೂ ಅಮೆರಿಕದ ಹಡಗುಗಳು ನೆರವನ್ನೂ ನೀಡಿವೆ.

ಈ ರೊಬೋಟ್‌ಗಳು ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳು ಹಾಗೂ ವಿಡಿಯೋ ನಿಜಕ್ಕೂ ಜೀವಜಗತ್ತಿನಲ್ಲೇ ಅತ್ಯಂತ ವಿಸ್ಮಯಕಾರಿ ಹಾಗೂ ಅಪರೂಪದ್ದು. ಇಂತಹ ಪ್ರಾಣಿ ಹಾಗೂ ಜೀವ ಸಂಕುಲಗಳನ್ನು ನಾವು ಈವರೆಗೆ ನಮ್ಮ ಸಂಶೋಧನಾ ಜೀವನದಲ್ಲಿ ನೋಡೇ ಇಲ್ಲ. ಇದು ಮೊದಲ ಬಾರಿಗೆ ಪತ್ತೆಯಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈವರೆಗಿನ ಸಂಶೋಧನೆಯಲ್ಲಿ ವಿಜ್ಞಾನಿಗಳು ಕೇವಲ 2.5 ಸೆಂ.ಮೀ ಗಾತ್ರದ ಜೇಡಗಳಿರುವುದನ್ನು ಮಾತ್ರ ಪತ್ತೆ ಹಚ್ಚಿದ್ದರು. ಈ ಬಾರಿ ನಡೆಸಿದ ವಿಜ್ಞಾನಿಗಳ ಸಂಶೋಧನೆಯಲ್ಲಿ 20 ಸೆಂ.ಮೀ ಗಾತ್ರದ ಬೃಹತ್ ಸಮುದ್ರ ಜೇಡಗಳು ಪತ್ತೆಯಾಗಿರುವುದು ವಿಶೇಷ.
ಸಂಬಂಧಿತ ಮಾಹಿತಿ ಹುಡುಕಿ