ಟಿಬೆಟ್‌ಗೆ ಪ್ರಸಕ್ತ ಸಾಲಿನಲ್ಲಿ ಐದು ಮಿಲಿಯನ್‌ಗಿಂತಲೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ.43.9ರಷ್ಟು ಹೆಚ್ಚಳವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಿಂದ ಆಗೋಸ್ಟ್ ತಿಂಗಳವರೆಗೆ ಚೀನಾದಿಂದಲೇ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಟಿಬೆಟ್‌ಗೆ ಭೇಟಿ ನೀಡಿದ್ದರೆ, ಅಂತಾರಾಷ್ಟ್ರೀಯದಿಂದ ಸುಮಾರು 160,000 ಪ್ರವಾಸಿಗರು ಆಗಮಿಸಿರುವುದಾಗಿ ವಿವರಿಸಿದ್ದಾರೆ.
ಆ ನಿಟ್ಟಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಪ್ರವಾಸಿಗರ ಸಂಖ್ಯೆ ಶೇ.43.9ರಷ್ಟು ಹೆಚ್ಚಳ ಕಂಡಿರುವುದಾಗಿ ಕ್ಸಿನ್‌ಹುವಾ ವರದಿ ಹೇಳಿದೆ. ಪ್ರವಾಸೋದ್ಯಮದಿಂದ ಟಿಬೆಟ್‌ನ ಆದಾಯ ಕೂಡ ಶೇ.37.3ರಷ್ಟು ಅಧಿಕವಾಗಿದೆ. ಕಳೆದ ಎಂಟು ತಿಂಗಳಲ್ಲಿಯೇ 4.44 ಬಿಲಿಯನ್ ಯುವಾನ್(653 ಮಿಲಿಯನ್ ಡಾಲರ್)ನಷ್ಟು ಆದಾಯ ಗಳಿಸಿದೆ.