ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸುವ ಕುರಿತು ನ್ಯಾಟೋ ಮತ್ತು ಅಮೆರಿಕದ ಅಧಿಕಾರಿಗಳ ನಡುವಿನ ಸಂಘರ್ಷದಿಂದಾಗಿ ಅಫ್ಘಾನ್-ಪಾಕಿಸ್ತಾನದ ಬ್ರಿಟನ್‌ನ ವಿಶೇಷ ರಾಜತಾಂತ್ರಿಕ ಪ್ರತಿನಿಧಿ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ.
ಬ್ರಿಟನ್‌ನ ಶೆರಾರ್ಡ್ ಕೌಪೆರ್ ಕೋಲೆಸ್ ಅವರು ತಾತ್ಕಾಲಿಕವಾಗಿ ತಮ್ಮ ಸ್ಥಾನ ತ್ಯಜಿಸಿದ್ದಾರೆ. ಆದರೆ ಕೋಲೆಸ್ ಅವರು ಈ ವರ್ಷದ ಅಂತ್ಯದೊಳಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಕೋಲೆಸ್ ಅವರ ಕೊಡುಗೆ ಮಹತ್ತರವಾದದ್ದು ಎಂದು ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹಗ್ಯೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೀಗ ತೆರವಾದ ಸ್ಥಾನಕ್ಕೆ ವಿದೇಶಾಂಗ ಕಚೇರಿಯ ದಕ್ಷಿಣ ಏಷ್ಯಾ ಮತ್ತು ಅಫ್ಘಾನಿಸ್ತಾನ ನಿರ್ದೇಶಕ ಕರೆನ್ ಪಿರೇಸ್ ವಿಶೇಷ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವಿವರಿಸಿದ್ದಾರೆ.