ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಜಕೀಯ ತಿಕ್ಕಾಟ: ಸೋಮಾಲಿಯಾ ಪ್ರಧಾನಿ ರಾಜೀನಾಮೆ (Somalia | Mogadishu | Prime Minister resigns | political turmoil)
Bookmark and Share Feedback Print
 
ದೇಶದಲ್ಲಿ ತಲೆದೋರಿರುವ ರಾಜಕೀಯ ಪ್ರಕ್ಷುಬ್ದತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅಧ್ಯಕ್ಷರ ಕರೆಯಂತೆ ಸೋಮಾಲಿ ಪ್ರಧಾನಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಧಾನಿ ಓಮರ್ ಅಬ್ದಿರಾಶಿದ್ ಅಲಿ ಶಾರ್‌ಮಾರ್ಕೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ದೇಶದ ಅಧ್ಯಕ್ಷರ ಸೂಚನೆಯಂತೆ ತಾವು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇಂತಹ ದೃಢ ನಿರ್ಧಾರ ಕೈಗೊಳ್ಳಲು ಕರೆ ನೀಡಿದ ಅಧ್ಯಕ್ಷ ಶೇಕ್ ಷರೀಪ್ ಶೇಕ್ ಅಹ್ಮದ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ದೇಶದ ಭದ್ರತೆಗೆ ಸಂಬಂಧಿಸಿದಂತೆ ತನ್ನ ಹಾಗೂ ಅಧ್ಯಕ್ಷರ ನಡುವಿನ ರಾಜಕೀಯ ತಿಕ್ಕಾಟದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು. ಇದರಿಂದಾಗಿ ದೇಶದ ರಕ್ಷಣೆ ಮತ್ತು ಮತ್ತೊಬ್ಬರಿಗೆ ಅವಕಾಶ ಮಾಡುವ ಉದ್ದೇಶ ಹೊಂದಿರುವುದಾಗಿ ಓಮರ್ ವಿವರಿಸಿದ್ದಾರೆ.

ಅಲ್ಲದೇ ಪ್ರಧಾನಿ ಓಮರ್ ಅವರ ನಿರ್ಧಾರ ಐತಿಹಾಸಿಕವಾದದ್ದು ಎಂದು ಅಧ್ಯಕ್ಷ ಅಹ್ಮದ್ ಬಣ್ಣಿಸಿದ್ದಾರೆ, ಇದರಿಂದಾಗಿ ಸೋಮಾಲಿಯಾದ ಹಿತ ಕಾಯಲು ಸಾಧ್ಯ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ