ವಾನ್ಕೋವರ್, ಬುಧವಾರ, 22 ಸೆಪ್ಟೆಂಬರ್ 2010( 18:51 IST )
ಕೆನಡಾ ಪ್ರಾಂತೀಯ ಸಚಿವರಾಗಿದ್ದ ಭಾರತೀಯ ಮೂಲದ ಮೊದಲ ಮಹಿಳೆ ಹಾವ್‌ಕಿನ್ಸ್ ( ಈ ಮೊದಲಿನ ಹೆಸರು ಸತಿಂದರ್ ಕೌರ್ ಅಹ್ಲುವಾಲಿಯಾ ಮಂಗಳವಾರ ಕಾಲ್‌ಗ್ರೇನಲ್ಲಿ ವಿಧಿವಶರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಸಮಯದಿಂದ ಲುಕೇಮಿಯಾ (ಬಿಳಿ ರಕ್ತಕಣಗಳು ಹೆಚ್ಚು ಕಾಯಿಲೆ)ದಿಂದ ಬಳಲುತ್ತಿದ್ದ 52ರ ಹರೆಯದ ಸಿಖ್ ಸಮುದಾಯದ ಮಹಿಳಾ ಸಚಿವೆ ಅಹ್ಲುವಾಲಿಯಾ ನಿಧನರಾಗಿದ್ದಾರೆ.
1996ರಲ್ಲಿ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಕೆಲೋನಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಳೆದ ವರ್ಷದವರೆಗೂ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ತೀವ್ರ ಅನಾರೋಗ್ಯ ಪೀಡಿತರಾಗಿದ್ದರು. ರಾಜಕೀಯ ಬರುವ ಮುನ್ನ ಅವರು ಸುಮಾರು 12 ವರ್ಷಗಳ ನರ್ಸ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಇದು ಬ್ರಿಟಿಷ್ ಕೊಲಂಬಿಯಾಕ್ಕೆ ಆದ ದೊಡ್ಡ ನಷ್ಟ ಎಂದು ಅಹ್ಲುವಾಲಿಯಾ ಅವರ ನಿಧನಕ್ಕೆ ಬ್ರಿಟನ್ ಕೊಲಂಬಿಯಾದ ಪ್ರಧಾನಿ ಗೋರ್ಡನ್ ಕ್ಯಾಂಪ್‌ಬೆಲ್ ಪ್ರತಿಕ್ರಿಯೆ ನೀಡಿದ್ದಾರೆ. ಆಕೆ ಮಾದರಿ ರಾಜಕಾರಣಿ ಹಾಗೂ ದೊಡ್ಡ ಸಮುದಾಯದ ಮುಖಂಡರಾಗಿದ್ದರು ಎಂದು ಪ್ರಧಾನಿ ಬಣ್ಣಿಸಿದ್ದಾರೆ.