ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: 'ತಾಲಿಬಾನ್ ಹಿಟ್‌ಲಿಸ್ಟ್'ನಲ್ಲಿ ಆರ್ಮಿ ವರಿಷ್ಠ ಕಯಾನಿ (Tehreek-e-Taliban | Pakistan | hit list | Ashfaq Kayani | Afghanistan)
ಪಾಕಿಸ್ತಾನ: 'ತಾಲಿಬಾನ್ ಹಿಟ್‌ಲಿಸ್ಟ್'ನಲ್ಲಿ ಆರ್ಮಿ ವರಿಷ್ಠ ಕಯಾನಿ
ಕರಾಚಿ, ಸೋಮವಾರ, 27 ಸೆಪ್ಟೆಂಬರ್ 2010( 16:36 IST )
ಪಾಕಿಸ್ತಾನ ಆರ್ಮಿ ವರಿಷ್ಠ ಅಶ್ಫಾಕ್ ಕಯಾನಿ ಮತ್ತು ಪ್ರಮುಖ ಕಮಾಂಡರ್ಸ್ ಅವರನ್ನು ಹತ್ಯೆಗೈಯಲು ತೆಹ್ರೀಕ್ ಇ ತಾಲಿಬಾನ್ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಸಿದೆ.
ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಸಭೆ ನಡೆಸಿ ಸರಕಾರದಲ್ಲಿರುವ ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಸಭೆಯಲ್ಲಿ ಉಗ್ರರು ಮುಂದೆ ನಡೆಸುವ ದಾಳಿ ಕುರಿತು ಚರ್ಚೆ ನಡೆಸಿದ್ದಲ್ಲದೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪರ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿರುವುದಾಗಿ ಗುಪ್ತಚರ ಇಲಾಖೆ ವಿವರಿಸಿದೆ.
ಅಷ್ಟೇ ಅಲ್ಲ ಮಿಲಿಟರಿ ವರಿಷ್ಠ ಕಯಾನಿ, ಪ್ರಮುಖ ಕಮಾಂಡರ್ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಹುನ್ನಾರ ನಡೆಸಿದ್ದು, ಈ ಬಗ್ಗೆ ಸೂಕ್ತ ಭದ್ರತೆ ಕೈಗೊಳ್ಳಬೇಕೆಂದು ಸೂಚಿಸಿದೆ.