ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯಾಯಾಂಗ ನಿಂದನೆ: ಶೋಭರಾಜ್ ಪತ್ನಿ, ಅತ್ತೆಗೆ ಜೈಲುಶಿಕ್ಷೆ (Charles Sobhraj | Kathmandu | serial killer | Nihita Biswas | Supreme Court)
ನ್ಯಾಯಾಂಗ ನಿಂದನೆ: ಶೋಭರಾಜ್ ಪತ್ನಿ, ಅತ್ತೆಗೆ ಜೈಲುಶಿಕ್ಷೆ
ಕಾಠ್ಮಂಡು, ಮಂಗಳವಾರ, 28 ಸೆಪ್ಟೆಂಬರ್ 2010( 15:45 IST )
ಸರಣಿ ಹಂತಕ, ಬಿಕಿನ್ ಕಿಲ್ಲರ್ ಕುಖ್ಯಾತಿಯ ಚಾರ್ಲ್ಸ್ ಶೋಭರಾಜ್‌ಗೆ ನೇಪಾಳ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ನೀಡಿರುವುದಕ್ಕೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ನ್ಯಾಯಾಂಗ ನಿಂದನಾ ಆರೋಪದಡಿಯಲ್ಲಿ ಚಾರ್ಲ್ಸ್ ಪತ್ನಿ ನಿಹಿತಾ ಹಾಗೂ ಅತ್ತೆಗೆ ದಂಡ ಸೇರಿದಂತೆ ಜೈಲುಶಿಕ್ಷೆ ವಿಧಿಸಿದೆ.
23ರ ಹರೆಯದ ನೇಪಾಳಿ ಚೆಲುವೆ ನಿಹಿತಾ ಬಿಸ್ವಾಸ್ ತನಗಿಂತ ಎರಡು ಪಟ್ಟು ಹೆಚ್ಚು ಪ್ರಾಯದ ಚಾರ್ಲ್ಸ್‌ನ ಪ್ರೇಮಪಾಶದಲ್ಲಿ ಬಿದ್ದಿದ್ದಳು. ಅಂತೂ ಕಾಠ್ಮಂಡು ಸೆಂಟ್ರಲ್ ಜೈಲಿನಲ್ಲಿದ್ದ ಚಾರ್ಲ್ಸ್‌ನನ್ನು ನಿಹಿತಾ ವಿವಾಹವಾಗಿದ್ದಳು. ಏತನ್ಮಧ್ಯೆ ಚಾರ್ಲ್ಸ್‌ಗೆ ವಿದೇಶಿ ಮಹಿಳೆ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೇಪಾಳ ಸುಪ್ರೀಂಕೋರ್ಟ್ ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆದರೆ ಕೋರ್ಟ್ ತೀರ್ಪಿನ ನಂತರ ನಿಹಿತಾ ಮತ್ತು ಆಕೆಯ ತಾಯಿ ಶಾಕುಂತಲಾ ನ್ಯಾಯಾಧೀಶರು ಲಂಚ ಪಡೆದು ತೀರ್ಪು ನೀಡಿದ್ದಾರೆಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿರುವ ಆರೋಪದ ಮೇಲೆ ನಿಹಿತಾಗೆ ಒಂದು ವಾರಗಳ ಕಾಲ ಜೈಲುಶಿಕ್ಷೆ ಹಾಗೂ 50 ನೇಪಾಳಿ ರೂಪಾಯಿ (30 ರೂಪಾಯಿಗಿಂತ ಕಡಿಮೆ) ದಂಡ ವಿಧಿಸಿದೆ.
ಅಲ್ಲದೇ ನ್ಯಾಯಾಧೀಶರಾದ ರಾಮ್ ಕುಮಾರ್ ಪ್ರಸಾದ್ ಶಾ ಹಾಗೂ ಬಲರಾಮ್ ಕೆ.ಸಿ.ನೇತೃತ್ವದ ಪೀಠ, ನಿಹಿತಾ ತಾಯಿ ಶಾಕುಂತಲಾ ಥಾಪಾಗೂ ಒಂದು ವಾರ ಜೈಲುಶಿಕ್ಷೆ ಹಾಗೂ 50 ನೇಪಾಳಿ ರೂಪಾಯಿ ದಂಡ ವಿಧಿಸಿದೆ.