ದಂಪತಿಗಳಿಗೆ ಒಂದೇ ಮಗು ಎಂಬ ನೀತಿಯನ್ನು ಮುಂದಿನ ಹತ್ತು ವರ್ಷಗಳ ಕಾಲ ಕೆಲವು ಕುಟುಂಬಗಳಿಗೆ ಚೀನಾ ಮುಂದುವರಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಚೀನಾದಲ್ಲಿ ಜನಸಂಖ್ಯೆ ಏರಿಕೆ ನಿಯಂತ್ರಿಸಲು ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದು ಮೂರು ವರ್ಷ ಸಂದಿದೆ. ಇದೀಗ ಆ ನೀತಿಯನ್ನು ಮತ್ತೆ ಹತ್ತು ವರ್ಷಗಳ ಕಾಲ ಮುಂದುವರಿಸಲು ನಿರ್ಧರಿಸಿದೆ. ಆದರೂ ಈ ನೀತಿಯಿಂದಾಗಿ ಎದುರಾಗುವ ಸಮಸ್ಯೆ ಯಾವುದೆಂದರೆ ಹೆಣ್ಣು ಮಗುವಾದರೆ, ಅದರಿಂದ ಮತ್ತಷ್ಟು ಜನಸಂಖ್ಯೆ ಹೆಚ್ಚಳವಾಗುತ್ತದೆ ಎಂಬ ಆತಂಕ ಚೀನಾದ್ದು.
ಜಗತ್ತಿನಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶ ಚೀನಾ. ಹಾಗಾಗಿಯೇ ದಂಪತಿಗಳಿಗೆ ಒಂದೇ ಮಗು ಎಂಬ ನೀತಿಯನ್ನು ಕಠಿಣ ರೀತಿಯಲ್ಲಿ ಜಾರಿಗೆ ತಂದಿತ್ತು. ಆದರೂ ಚೀನಾ ಸರಕಾರ ಈ ನೀತಿಯನ್ನು ಸಡಿಲಿಸಿದೆ ಎಂಬುದಾಗಿ ಮಾಧ್ಯಮಗಳು ಮತ್ತು ಸಾರ್ವಜನಿಕರು ತುಂಬಾ ವಿಶ್ವಾಸವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಹೆಚ್ಚಿನವರು ಎರಡು ಮಕ್ಕಳು ಬೇಕು ಎಂಬ ಇರಾದೆ ಹೊಂದಿದ್ದಾರೆ.
2015ರ ವೇಳೆಗೆ ಕೆಲವು ಸಡಿಲಿಕೆ ಮಾಡಲಾಗುವುದು ಎಂದು ದಕ್ಷಿಣ ಪ್ರಾಂತ್ಯದ ಗುವಾಂಗ್‌ಡಾಂಗ್‌ನ ಫ್ಯಾಮಿಲಿ ಪ್ಲ್ಯಾನಿಂಗ್ ಅಧಿಕಾರಿಗಳು ತಿಳಿಸಿದ್ದು, 2030ರ ವೇಳೆಗೆ ಒಂದೇ ಮಗು ನೀತಿಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಒಂದೇ ಮಗು ನೀತಿಯನ್ನು ಶೀಘ್ರದಲ್ಲೇ ಬದಲಾವಣೆ ಮಾಡುವ ಯಾವ ಸಾಧ್ಯತೆ ಇಲ್ಲ ಎಂದು ರಾಷ್ಟ್ರೀಯ ಜನಸಂಖ್ಯಾ ಮತ್ತು ಕುಟುಂಬ ಯೋಜನಾ ಆಯೋಗದ ಅಧ್ಯಕ್ಷ ಲೀ ಬಿನ್ ಸ್ಪಷ್ಟಪಡಿಸಿರುವುದಾಗಿ ಚೀನಾ ದೈನಿಕ ವರದಿ ಹೇಳಿದೆ.