ರಷ್ಯಾದ ಕಜಕಿಸ್ತಾನ್ ಗಡಿಭಾಗದ ದಕ್ಷಿಣ ಸೈಬಿರಿಯಾದ ಬೆಂಗಾಡಿನಲ್ಲಿ ಸುಮಾರು ನಾಲ್ಕು ಸಹಸ್ರ ವರ್ಷಗಳ ಹಿಂದೆ ಆರ್ಯರು ರಚಿಸಿದ್ದಾರೆನ್ನಲಾದ ನಗರವೊಂದನ್ನು ರಷ್ಯಾದ ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
ಆರ್ಯರ ಪುರಾತನ 20 ನೆಲೆಗಳನ್ನು ಪತ್ತೆ ಮಾಡಿದ್ದು, ಅವು ವೃತ್ತಾಕಾರದಲ್ಲಿವೆ. ಈ ನೆಲೆಗಳಲ್ಲಿನ ಕಟ್ಟಡಗಳು ಅಸ್ತಿತ್ವಕ್ಕೆ ಬಂದಾಗ ಪಾಶ್ಚಿಮಾತ್ಯ ಜಗತ್ತು ಇನ್ನೂ ಆರಂಭದ ಹಂತದಲ್ಲಿತ್ತು. ಕಂಚು ಯುಗದಲ್ಲಿ ಈ ನೆಲೆಗಳಲ್ಲಿ ನೆಲೆಸಿದ್ದ ಆರ್ಯರು ಸ್ವಸ್ತಿಕ್ ಚಿನ್ನೆಯನ್ನು ಮುಂದೆ ನಾಜಿಗಳು 1930ರಲ್ಲಿ ತಮ್ಮದನ್ನಾಗಿ ಮಾಡಿಕೊಂಡರು ಎಂದು ತಜ್ಞರು ತಿಳಿಸಿದ್ದಾರೆ.
ಬಿಬಿಸಿಯಲ್ಲಿ ಬಿತ್ತರಿಸುವ ಉದ್ದೇಶದಿಂದ ಆರ್ಯರ ಹೆಜ್ಜೆ ಜಾಡಿನ ಹುಡುಕಾಟ ಕಾರ್ಯಕ್ರಮಕ್ಕಾಗಿ ರಷ್ಯಾದ ಈ ಪ್ರದೇಶಕ್ಕೆ ಬಂದಿದ್ದ ಇತಿಹಾಸಕಾರ ಬೆಟನ್ ಹಗೆಸ್ ಅವರು, ಇದರೊಂದಿಗೆ ಆರ್ಯರ ಇತಿಹಾಸದಲ್ಲಿನ ಕಳೆದುಹೋಗಿದ್ದ ಕೊಂಡಿಯೊಂದು ಸಿಕ್ಕಂತಾಗಿದೆ ಎಂದಿದ್ದಾರೆ.
ಆರ್ಯರ ಊರುಗಳೆಂದು ಗುರುತಿಸುವ ಈ ನೆಲೆಗಳ ಉತ್ಖನನದಲ್ಲಿ ಅಪಾರ ಸಂಖ್ಯೆಯ ಮಡಕೆ ತುಂಡುಗಳನ್ನು, ಅಲಂಕಾರ ಸಾಮಾಗ್ರಿಗಳನ್ನು, ಬಂಡಿಗಳನ್ನೂ ಹೊರತೆಗೆಯಲಾಗಿದೆ. ಅಮರತ್ವ ಮತ್ತು ಸೂರ್ಯನನ್ನು ಸ್ವಸ್ತಿಕ್ ಮಾದರಿಯ ವಸ್ತುಗಳೂ ಪತ್ತೆಯಾಗಿದೆ. ಯಜ್ಞಯಾಗಾದಿಗಳ ಪುರಾವೆಗಳೂ ಲಭಿಸಿವೆ ಎಂದು ತಿಳಿಸಿದ್ದಾರೆ.