ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಿಲಿ ಸುರಂಗ ಕುಸಿತ; 2ತಿಂಗಳು ಕಾರ್ಯಾಚರಣೆ 33 ಮಂದಿಯೂ ಪಾರು! (miners rescued | Chile's 33 miners | rescued | San Jose gold)
Bookmark and Share Feedback Print
 
ಸತತ 33 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಸುಮಾರು ಎರಡು ತಿಂಗಳ ಕಾಲ ಚಿಲಿಯ ಕಲ್ಲಿದ್ದಲು ಗಣಿ ಸುರಂಗದೊಳಕ್ಕೆ ಸಿಲುಕಿಕೊಂಡಿದ್ದ 33 ಕಾರ್ಮಿಕರನ್ನು ರಕ್ಷಿಸುವ ಮೂಲಕ ಎಲ್ಲರೂ ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಲೂಯಿಸ್ ಉರ್ಜುವಾ(54) ಅವರನ್ನು ಕಲ್ಲಿದ್ದಲು ಗಣಿಯೊಳಗಿಂದ ಹೊರತೆಗೆದಿದ್ದು, ಸುಮಾರು ಎರಡು ತಿಂಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲಾ 33 ಮಂದಿಯನ್ನು ರಕ್ಷಿಸಿರುವುದು ಜಾಗತಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಆಗೋಸ್ಟ್ 5ರಂದು ಕಲ್ಲಿದ್ದಲು ಗಣಿಯೊಳಗೆ ಕೆಲಸ ಮಾಡುತ್ತಿದ್ದ ವೇಳೆ ಸುರಂಗಮಾರ್ಗ ಕುಸಿದು ಬಿದ್ದಿತ್ತು. ಸುಮಾರು 17 ದಿನಗಳ ಕಾಲ ಗಣಿಯೊಳಗೆ ಸಿಕ್ಕಿಬಿದ್ದವರು ರಕ್ಷಣೆಯ ವಿಶ್ವಾಸದಲ್ಲಿಯೇ ಇದ್ದಿದ್ದರು. ಆದರೆ ಅವರನ್ನು ಯಾರೂ ಅಲ್ಲಿಯವರೆಗೂ ಅವರನ್ನು ಸಂಪರ್ಕಿಸಲು ಅಥವಾ ಪತ್ತೆ ಹಚ್ಚಲು ಸಾಧ್ಯವಾಗಿಲ್ಲವಾಗಿತ್ತು. ಜನರೆಲ್ಲ ಗಣಿಯೊಳಗೆ ಇದ್ದವರೆಲ್ಲ ಸಾವನ್ನಪ್ಪಿರಬೇಕೆಂದೇ ಶಂಕಿಸಿದ್ದರು.

17ನೇ ದಿನ ಡ್ರಿಲ್ ಮೂಲಕ ಅವರನ್ನು ಸಂಪರ್ಕಿಸಿದಾಗ, ಗಣಿ ಕಾರ್ಮಿಕರು ನಾವೆಲ್ಲ ಶೆಲ್ಟರ್ ಒಳಗೆ ಸುರಕ್ಷಿತವಾಗಿದ್ದೇವೆ ಎಂಬ ನೋಟ್ ಅನ್ನು ಕಳುಹಿಸಿದ್ದರು. ಇದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಚಿಲಿ ಅಧ್ಯಕ್ಷ ಪಿನೆರಾ ಅವರು ರಕ್ಷಣಾ ಕಾರ್ಯ ಭರದಿಂದ ನಡೆಸುವಂತೆ ಸೂಚಿಸಿದ್ದರು. ರಕ್ಷಣಾ ತಂಡ ಕೊಳವೆ ಮೂಲಕ ಸ್ಯಾನ್ ಜೋಸ್ ತಾಮ್ರ ಗಣಿ ಸುರಂಗದೊಳಗೆ ಸಿಲುಕಿದ್ದ 33 ಮಂದಿಗೆ ಹಸಿವು ನಿವಾರಿಸುವ ಮಾತ್ರೆಗಳನ್ನು ಕಳುಹಿಸುತ್ತಿದ್ದರು.

ಅಂತೂ ಸತತ 69 ದಿನಗಳ ಕಾಲ ಸುರಂಗದೊಳಗೆ ಸಿಲುಕಿದ್ದ 33 ಮಂದಿಯನ್ನೂ ರಕ್ಷಣಾ ತಂಡ ಯಶಸ್ವಿಯಾಗಿ ಕಾರ್ಯಾಚರಿಸುವ ಮೂಲಕ ರಕ್ಷಿಸಿದ್ದರು. ಚಿಲಿಯ ಉತ್ತರ ಭಾಗದ ಸ್ಯಾನ್ ಜೋಸ್ ಚಿನ್ನ ಮತ್ತು ತಾಮ್ರದ ಗಣಿಯೊಳಗೆ ಸಿಲುಕಿದ್ದ ಕಾರ್ಮಿಕರು ಪವಾಡ ಸದೃಶ ಪಾರಾಗಿ ಬಂದ ನಂತರ ಇಡೀ ದೇಶಾದ್ಯಂತ ಸಂಭ್ರಮ ಆಚರಿಸಲಾಗಿತ್ತು.

ಜೀವಂತವಾಗಿ ಹೊರಬಂದ ಕಾರ್ಮಿಕರನ್ನು ಮನೆಯವರು, ಬಂಧುಗಳು ಆನಂದಬಾಷ್ಪ ಸುರಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೊಂದು ಮಹತ್ತರವಾದ ಯಶಸ್ವಿ ಕಾರ್ಯಾಚರಣೆ ಎಂದು ದೇಶದ ಅಧ್ಯಕ್ಷರು ಬಣ್ಣಿಸಿದ್ದಾರೆ.

ವಿಶ್ವದ ಗಮನ ಸೆಳೆದ ರಕ್ಷಣಾ ಕಾರ್ಯಾಚರಣೆ: ಸ್ಯಾನ್ ಜೋಸ್ ತಾಮ್ರದ ಗಣಿ ಸುರಂಗದೊಳಗೆ ಸಿಲುಕಿ ಸುಮಾರು 17 ದಿನಗಳ ನಂತರ ರಕ್ಷಣಾ ಕಾರ್ಯ ಆರಂಭಿಸಿದ್ದ ಈ ಘಟನೆ ಜಾಗತಿಕವಾಗಿ ಗಮನ ಸೆಳೆದಿತ್ತು. ಸುಮಾರು 1,500 ಪತ್ರಕರ್ತರು (ದೃಶ್ಯ ಮತ್ತು ಮುದ್ರಣ ಮಾಧ್ಯಮ) ಘಟನಾ ಸ್ಥಳದಿಂದ ಕ್ಷಣ, ಕ್ಷಣದ ವರದಿಯನ್ನು ಮಾಡುತ್ತಿದ್ದರು. ಅಂತೂ 33 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 33 ಕಾರ್ಮಿಕರನ್ನು ಯಶಸ್ವಿಯಾಗಿ ಹೊರ ತೆಗೆದ ರಕ್ಷಣಾ ತಂಡಕ್ಕೆ ಬಗ್ಗೆ ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಅಭಿನಂದನೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ