ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್ ಸಮರ: ಐದು ವರ್ಷದಲ್ಲಿ 77 ಸಾವಿರ ಬಲಿ! (US military | Iraq | America | Human Rights | security officials)
Bookmark and Share Feedback Print
 
ಇರಾಕ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ ಇರಾಕ್ ನಾಗರಿಕರು ಹಾಗೂ ಭದ್ರತಾ ಪಡೆಗಳು ಸೇರಿ ಸುಮಾರು 77 ಸಾವಿರ ಮಂದಿ ಬಲಿಯಾಗಿದ್ದಾರೆ ಎಂದು ಅಮೆರಿಕ ಮಿಲಿಟರಿ ಪಡೆ ಅಂಕಿ-ಅಂಶವನ್ನು ಹೊರಹಾಕಿದೆ.

ಇರಾಕ್‌ನಲ್ಲಿ ನಡೆಯುತ್ತಿರುವ ಸಮರದಲ್ಲಿನ ಸಾವಿನ ಲೆಕ್ಕಚಾರ ಹಾಕಿ ಈ ಮಾಹಿತಿ ನೀಡಿರುವುದಾಗಿ ಅಮೆರಿಕ ಮಿಲಿಟರಿ ತಿಳಿಸಿದೆ. 2004ರ ಜನವರಿಯಿಂದ 2008ರ ಆಗೋಸ್ಟ್‌ವರೆಗೆ ನಡೆದ ಹೋರಾಟದಲ್ಲಿ ಸುಮಾರು 77 ಸಾವಿರ ಜನರು ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಆದರೆ 2004ರ ಜನವರಿಯಿಂದ 2008ರ ಅಕ್ಟೋಬರ್ 31ರವರೆಗೆ ಸುಮಾರು 85,694 ಮಂದಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಗಳು ಬಲಿಯಾಗಿರುವುದಾಗಿ ಕಳೆದ ಬಾರಿ ಲೆಕ್ಕಚಾರ ಹಾಕಿದ್ದ ಇರಾಕ್ ಮಾನವ ಹಕ್ಕು ಸಚಿವಾಲಯ ತಿಳಿಸಿತ್ತು.

ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಅಮೆರಿಕ ನೇತೃತ್ವದ ಪಡೆ ಶಸ್ತ್ರಸಜ್ಜಿತ ಹೋರಾಟ ನಡೆಸುತ್ತಲೇ ಇದೆ. ಆದರೆ ಇರಾಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಜಗತ್ತಿನ ಅನೇಕ ದೇಶಗಳು ತೀವ್ರವಾಗಿ ವಿರೋಧಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ