ನ್ಯೂಯಾರ್ಕ್, ಭಾನುವಾರ, 24 ಅಕ್ಟೋಬರ್ 2010( 15:42 IST )
ಮಹಿಳೆಯೊಬ್ಬಳನ್ನು ಕೊಂದು, ಕೊಳೆತ ಶವದ ಜತೆ ಎರಡು ದಿನಗಳ ಕಾಲ ಕಳೆದ ಹಂತಕನಿಗೆ ನ್ಯೂಯಾರ್ಕ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
31ರ ಹರೆಯದ ಮೈಕೇಲ್ ಲೆನಾಹಾನ್ ಎಂಬಾತ 2007ರಲ್ಲಿ ಚೈನಾಟೌನ್‌ನ ಕನ್ಪೂಶಿಯಸ್ ಪ್ಲಾಜಾದಲ್ಲಿ ಲೋರ್‌ನಾ ಸ್ಯಾಂಟಿಯಾಗೋ (24)ಳನ್ನು ಹತ್ಯೆಗೈದಿದ್ದ. ನಂತರ ಎರಡು ದಿನಗಳ ಕಾಲ ಆಕೆಯ ಕೊಳೆತ ಶವದ ಜೊತೆ ನಿದ್ದೆ ಕೂಡ ಮಾಡಿದ್ದ. ಅಷ್ಟೇ ಅಲ್ಲ ಆಕೆಯ ಕ್ರೆಡಿಟ್ ಕಾರ್ಡ್‌ನಿಂದ ಆಲ್ಕೋಹಾಲ್ ಖರೀದಿಸಿ ತಂದಿದ್ದ ಎಂದು ಫಾಕ್ಸ್ ನ್ಯೂಸ್ ವರದಿ ತಿಳಿಸಿದೆ.
ಲೋರ್‌ನಾಳನ್ನು ಹತ್ಯೆಗೈದ ನಂತರ ಮೈಕೇಲ್ ಎರಡು ದಿನಗಳ ಕಾಲ ಶವವನ್ನು ರಕ್ಷಿಸಿಡುವ ಬಗ್ಗೆ ವೆಬ್‌ಸೈಟ್‌ನಲ್ಲಿ ಹುಟುಕಾಟ ನಡೆಸಿದ್ದ. ಆ ಸಂದರ್ಭದಲ್ಲಿ ಆಕೆಯ ಕ್ರೆಡಿಟ್ ಕಾರ್ಡ್‌ನಿಂದ ಆಲ್ಕೋಹಾಲ್ ಖರೀದಿಸಿ ತಂದಿರುವುದಾಗಿ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ವಿವರಿಸಿದ್ದರು.
ಪೊಲೀಸರು ಶಂಕೆಯ ಮೇಲೆ ಅಪಾರ್ಟ್‌ಮೆಂಟ್‌ಗೆ ದಾಳಿ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು. ಆದರೆ ಹಂತಕ ಲೆನಾಹಾನ್ ಇದೊಂದು ಆಕಸ್ಮಿಕ ಘಟನೆ ಎಂದು ತಿಳಿಸಿದ್ದ. ನಾನು ತುಂಬಾ ಒಳ್ಳೆಯ ವ್ಯಕ್ತಿ ಎಂದು ಮ್ಯಾನ್‌ಹಟ್ಟನ್ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ವೇಳೆ ಲೆನಾಹಾನ್ ತಿಳಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೊಂದು ಕ್ರೂರ ಘಟನೆ, ಹಾಗಾಗಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ತೀರ್ಪು ನೀಡಿತ್ತು.