ಭ್ರಷ್ಟಾಚಾರದಲ್ಲಿ ಪಾಕಿಸ್ತಾನ ಜಗತ್ತಿನಲ್ಲೇ ನಂ-1 ದೇಶ: ವರದಿ
ಇಸ್ಲಾಮಾಬಾದ್, ಸೋಮವಾರ, 25 ಅಕ್ಟೋಬರ್ 2010( 12:59 IST )
ಪಾಕಿಸ್ತಾನ ಜಗತ್ತಿನ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸುವ ಸಾಧ್ಯತೆ ಇರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಕಳೆದ ವರ್ಷ ಗ್ಲೋಬಲ್ ವಾಚ್‌ಲಿಸ್ಟ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪಾಕಿಸ್ತಾನ 42ನೇ ಸ್ಥಾನ ಪಡೆದಿತ್ತು. ಇದೀಗ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಮಂಗಳವಾರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಪಾಕಿಸ್ತಾನ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವರದಿ ವಿವರಿಸಿದೆ.
ಭ್ರಷ್ಟ ದೇಶಗಳ ಪಟ್ಟಿ ತಯಾರಿಕೆಗೆ ವಿಶ್ವಬ್ಯಾಂಕ್ ಮತ್ತು ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳ ನೆರವಿನಿಂದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ ತಯಾರಿಸಿದೆ. ಕಳೆದ 12 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದಾಗಿ ವರದಿ ಹೇಳಿದೆ.
ಆ ನಿಟ್ಟಿನಲ್ಲಿ ಪಾಕಿಸ್ತಾನ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನವನ್ನು ಪಟ್ಟಿಯಲ್ಲಿ ಗಿಟ್ಟಿಸಲಿದೆ ಎಂದು ಮೂಲವೊಂದು ತಿಳಿಸಿದೆ. 2009ರಲ್ಲಿ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನ್ ಕರಪ್ಶನ್ ಪರ್‌ಸೆಪ್ಶನ್ಸ್ ಇಂಡೆಕ್ಸ್ ನಡೆಸಿದ 180 ದೇಶಗಳ ಪಟ್ಟಿಯಲ್ಲಿ, ಪಾಕಿಸ್ತಾನ 42ನೇ ಸ್ಥಾನ ಪಡೆದಿತ್ತು. ಹಾಗಾಗಿ ಪಾಕಿಸ್ತಾನ ಸರಕಾರ ಉತ್ತಮ ಆಡಳಿತ ನೀಡುವ ಮೂಲಕ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕೆಂದು ಅಂತಾರಾಷ್ಟ್ರೀಯ ಮಂಡಳಿ ಸಲಹೆ ನೀಡಿದೆ.