ಮ್ಯಾನ್ಮಾರ್‌ನಲ್ಲಿ ಬಂಧನದಲ್ಲಿರುವ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂ ಕೀ ಅವರನ್ನು ಮುಂದಿನ ತಿಂಗಳು ಬಂಧಮುಕ್ತಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವ ಮಾರ್ಟೈ ನಾಟಾಲೆಗಾವಾ ತಿಳಿಸಿದ್ದಾರೆ.
ಸೂ ಕೀ ಈಗಾಗಲೇ ತಮ್ಮ ಶಿಕ್ಷೆಯ ಅವಧಿಯನ್ನು ಮುಗಿಸಿದ್ದಾರೆ. ಹಾಗಾಗಿ ಮತ್ತೆ ಅವರ ಗೃಹಬಂಧನದ ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಮುಂದಿನ ತಿಂಗಳು ಅವರನ್ನು ಬಿಡುಗಡೆ ಮಾಡಲಾಗುವುದು ಎಂದರು.
ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂ ಕೀ ಅವರ ಬಂಧನದ ಅವಧಿ ನವೆಂಬರ್‌ಗೆ ಮುಕ್ತಾಯವಾಗಲಿದೆ. ಅಲ್ಲದೇ ನ.7ರಂದು ಸುಮಾರು 20 ವರ್ಷಗಳ ನಂತರ ಮೊದಲ ಬಾರಿಗೆ ಮ್ಯಾನ್ಮಾರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಚುನಾವಣೆ ನಡೆದ ನಂತರ ಸೂ ಕೀ ಬಂಧಮುಕ್ತಗೊಳ್ಳಲಿದ್ದಾರೆ ಎಂದು ಮಾರ್ಟೈ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.