ಜಪಾನ್ ರಾಯಭಾರ ಕಚೇರಿಯ ವಾಹನದ ಮೇಲೆ ಗನ್‌ಮ್ಯಾನ್‌ಗಳಿಬ್ಬರು ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಪಾಕಿಸ್ತಾನದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕರಾಚಿಯಲ್ಲಿನ ಜಪಾನ್ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಪಾಕಿಸ್ತಾನಿ ನೌಕರರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ದರೋಡೆ ಮಾಡುವ ಉದ್ದೇಶದಿಂದ ಇಬ್ಬರು ಗನ್‌ಮ್ಯಾನ್ ವ್ಯಕ್ತಿಗಳು ಮೋಟಾರ್ ಸೈಕಲ್‌ನಲ್ಲಿ ಆಗಮಿಸಿ ವಾಹನದ ಮೇಲೆ ದಾಳಿ ನಡೆಸಿದ್ದಾರೆಂದು ಪೊಲೀಸ್ ಅಧಿಕಾರಿ ಜಾವೇದ್ ಅಕ್ಬರ್ ರಿಯಾಜ್ ಹೇಳಿದ್ದಾರೆ.
ಕರಾಚಿ ಪಾಕಿಸ್ತಾನದ ಬೃಹತ್ ನಗರವಾಗಿದೆ. ಅದೇ ರೀತಿ ಅಪರಾಧ ಕೂಡ ಈ ನಗರದಲ್ಲಿ ವಿಪರೀತವಾಗಿ ಹೆಚ್ಚಳವಾಗಿದೆ. ಕಳೆದ ಹತ್ತು ವರ್ಷಗಳಿಂದ ಕರಾಚಿಯಲ್ಲಿ ಅಪರಾಧ ತಡೆಗಟ್ಟುವಲ್ಲಿ ಪಾಕ್ ಅಧಿಕಾರಿಗಳು ವಿಫಲರಾಗಿದ್ದಾರೆ.