ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐಎಸ್ಐ ಕರಾಚಿಯಲ್ಲಿ ಮಾತ್ರ ತನ್ನ ಕಾರಸ್ಥಾನವನ್ನು ಹೊಂದಿಲ್ಲ. ಲಷ್ಕರ್ ಎ ತೊಯ್ಬಾದ ಮೂಲಕ ಸ್ಥಳೀಯರನ್ನು ಬಳಸಿಕೊಂಡು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ನೇಪಾಳದಲ್ಲೂ ಒಂದು ಕಾರಸ್ಥಾನವನ್ನು ಹೊಂದಿದೆ ಎಂದು ಅಮೆರಿಕದ ಪಾಕ್ ಸಂಜಾತ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಬಾಯ್ಬಿಟ್ಟಿದ್ದಾನೆ.
ಅಮೆರಿಕದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕಳೆದ ಜೂನ್ ತಿಂಗಳಲ್ಲೇ ಹೆಡ್ಲಿ ನೇಪಾಳದಲ್ಲಿ ಐಎಸ್ಐ ಕಾರಸ್ಥಾನವಿರುವ ಬಗ್ಗೆ ಹೇಳಿದ್ದು, ಅಲ್ಲಿಂದ ಭಾರತದಲ್ಲಿ ಐಎಸ್ಐ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ ಎಂದೂ ಹೇಳಿದ್ದಾನೆ.
ಅಲ್ಲದೇ ಈಗಾಗಲೇ ಭಾರತದಲ್ಲಿ ನಡೆದ ಸ್ಫೋಟದ ಹಿಂದೆ ಪಾಕಿಸ್ತಾನದ ಐಎಸ್ಐ ನೇರವಾಗಿಯೇ ಎಲ್ಲಾ ರೀತಿಯ ಸಹಾಯ ನೀಡಿತ್ತು ಎಂಬುದಾಗಿ ಭಾರತೀಯ ತನಿಖಾಧಿಕಾರಿಗಳಿಗೆ ತಿಳಿಸಿದ್ದ. ಭಾರತದಲ್ಲಿನ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಡ್ಲಿಯನ್ನು ಭಾರತೀಯ ಅಧಿಕಾರಿಗಳು ಅಮೆರಿಕದಲ್ಲಿ ತನಿಖೆ ನಡೆಸಿ ಮಹತ್ವದ ಮಾಹಿತಿ ಪಡೆದಿದ್ದರು.