'ಮೊಹಮ್ಮದ್' ಎಂಬುದು ತುಂಬಾ ಜನಪ್ರಿಯ ಹೆಸರಾಗಿದ್ದು, ಇಂಗ್ಲೆಂಡ್ ಮತ್ತು ವಾಲ್ಸ್‌ನಲ್ಲಿ ಜನಿಸುವ ನವಜಾತ ಗಂಡು ಮಕ್ಕಳಿಗೆ ಹೆಚ್ಚಾಗಿ ಈ ಹೆಸರನ್ನೇ ಇಡಲಾಗುತ್ತಿದೆ ಎಂದು ನೂತನವಾಗಿ ಬಿಡುಗಡೆಗೊಂಡ ಸಮೀಕ್ಷೆಯೊಂದು ತಿಳಿಸಿದೆ.
2009ರ ಸಮೀಕ್ಷೆಯ ಪ್ರಕಾರ 7,364 ಶಿಶುಗಳಿಗೆ ಮೊಹಮ್ಮದ್ ಎಂಬ ಹೆಸರನ್ನು ಇಡಲಾಗಿದೆಯಂತೆ, ಆದರೆ ಹೆಸರಿನ ಕೊನೆಯಲ್ಲಿ ಜಾಕ್ಸ್, ಹ್ಯಾರಿ, ಅಲ್‌ಫೈ...ಹೀಗೆ ವಿವಿಧ ರೀತಿಯಲ್ಲಿ ಸೇರಿಸಲಾಗಿದೆ ಎಂದು ನ್ಯಾಷನಲ್ ಅಂಕಿ-ಅಂಶ ಇಲಾಖೆ ವಿವರಿಸಿದೆ.
ಮುಸ್ಲಿಮರಲ್ಲಿ ಮೊಹಮ್ಮದ್ ಎಂಬ ಹೆಸರು ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಬರ್ಮಿಂಗ್‌ಹ್ಯಾಮ್ ನಗರ ಸೇರಿದಂತೆ ಸೆಂಟ್ರಲ್ ಇಂಗ್ಲೆಂಡ್ ಮತ್ತು ಲಂಡನ್ ಭಾಗದಲ್ಲಿ ಜನಿಸಿರುವ ಗಂಡು ಮಕ್ಕಳಿಗೆ ಹೆಚ್ಚಾಗಿ ಮೊಹಮ್ಮದ್ ಎಂಬ ಹೆಸರನ್ನೇ ಇಡಲಾಗಿದೆಯಂತೆ.
ಅದೇ ರೀತಿ ಒಲಿವಿಯಾ ಎಂಬುದು ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಇಡಲಾಗಿದೆ. ಸುಮಾರು 5,201 ಹೆಣ್ಣು ಮಗುವಿಗೆ ಒಲಿವಿಯಾ ಹೆಸರನ್ನು ಇಡಲಾಗಿದೆ. ಅಲ್ಲದೆ ಹೆಸರಿನ ಕೊನೆಗೆ ರೂಬೈ, ಎಮಿಲಿ ಹಾಗೂ ಸೋಫೈ ಸೇರಿಸಲಾಗುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.ಒಟ್ಟಾರೆ ಇಂಗ್ಲೆಂಡ್ ಮತ್ತು ವಾಲ್ಸ್‌ನಲ್ಲಿ ಮೊಹಮ್ಮದ್ ಎಂಬ ಹೆಸರು ಜನಪ್ರಿಯವಾಗುತ್ತಿದೆ ಎಂದು ಸಮೀಕ್ಷೆ ಅಭಿಪ್ರಾಯ ವ್ಯಕ್ತಪಡಿಸಿದೆ.