ಅಪಹರಣಗೊಂಡಿದ್ದ ತೈಲ ಕಂಪನಿ ಒಡೆತನದ ನೈಜೀರಿಯ ಶಾಲೆಯೊಂದರ ಭಾರತೀಯ ಪ್ರಿನ್ಸಿಪಾಲ್ ಅವರನ್ನು ಬಂಧಮುಕ್ತಗೊಳಿಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ. ಪ್ರಿನ್ಸಿಪಾಲ್‌ರನ್ನು ಅಕ್ಟೋಬರ್ 13ರಂದು ಅಪಹರಿಸಿದ್ದರು.
ಆಗ್ನೇಯ ನೈಜೀರಿಯಾದ ಎಕೆಟ್ ನಗರದಲ್ಲಿನ ಎಕ್ಸೋನ್ ಮೋಬಿಲ್ ಪೆಗಾಸುಸ್ ಶಾಲೆಯ ಪ್ರಿನ್ಸಿಪಾಲ್ ಲಕ್ಷ್ಮಿ ಟೋಂಬುಶ್ ಅವರನ್ನು ಗುರುವಾರ ರಾತ್ರಿ ಬಂಧಮುಕ್ತಗೊಳಿಸಿರುವುದಾಗಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಿನ್ಸಿಪಾಲ್ ಅವರನ್ನು ಎಕೆಟ್ ಪ್ರದೇಶದಿಂದ ಅಪರಿಚಿತ ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು ಅಪಹರಿಸಿಕೊಂಡು ಹೋಗಿದ್ದರು.ಆದರೆ ಯಾವ ಕಾರಣಕ್ಕಾಗಿ ಅವರನ್ನು ಅಪಹರಿಸಲಾಗಿತ್ತು ಎಂಬುದು ತಿಳಿಯಲಿಲ್ಲವಾಗಿತ್ತು. ಯಾಕೆಂದರೆ ಅಪಹೃತರಿಂದ ಯಾವುದೇ ಬೇಡಿಕೆ ಬಂದಿರಲಿಲ್ಲವಾಗಿತ್ತು. ಆದರೆ ಇದೀಗ ಪ್ರಿನ್ಸಿಪಾಲ್ ಅವರನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.