ಪಾಕಿಸ್ತಾನದಲ್ಲಿನ ಭಯೋತ್ಪಾದನೆ 'ಕ್ಯಾನ್ಸರ್' ಇದ್ದಂತೆ: ಯುಎಸ್
ವಾಷಿಂಗ್ಟನ್, ಬುಧವಾರ, 10 ನವೆಂಬರ್ 2010( 12:43 IST )
ಪಾಕಿಸ್ತಾನ ಭಯೋತ್ಪಾದನೆ ಕ್ಯಾನ್ಸರ್ ರೀತಿಯಲ್ಲಿ ತೀವ್ರವಾಗಿ ಬೆಳೆಯುತ್ತಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಟಿಮೋತಿ ರೋಮರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ತನ್ನ ನೆಲದಲ್ಲಿ ಸಮಸ್ಯೆಗಳಿವೆ ಎಂಬುದನ್ನು ಅರಿತಿದೆ. ಅದು ಭಯೋತ್ಪಾದನೆ ಕ್ಯಾನ್ಸರನ್ನು ಹೊಂದಿದೆ ಎಂದು ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ ಎಂದ ಅವರು, ಭಾರತದ ಆರ್ಥಿಕತೆ ಶೇ.9,10ರ ಪ್ರಮಾಣದಲ್ಲಿ ಸಾಗುತ್ತಿರುವಾಗ ಪ್ರಾದೇಶಿಕ ಮತ್ತು ಕಾರ್ಯತಂತ್ರ ಅಂಶಗಳ ಹಿತಾಸಕ್ತಿಗೆ ಅದರ ಗಡಿ ಭಾಗದಲ್ಲಿ ಸ್ಥಿರತೆ ಇರುವುದು ಅಗತ್ಯವಾಗಿದೆ ಎಂದು ಹೇಳಿದರು.
ಅಮೆರಿಕ ಮತ್ತು ಭಾರತ ದೇಶಗಳು ಅಫ್ಘಾನಿಸ್ತಾನದ ವಿಚಾರದಲ್ಲಿ ಒಂದೇ ರೀತಿಯ ಅಭಿಪ್ರಾಯ ತಳೆದಿವೆ. ಎರಡೂ ರಾಷ್ಟ್ರಗಳು ಶಾಂತಿ, ಸೌಹಾರ್ದಯುತ ಹಾಗೂ ಸ್ವತಂತ್ರ ಅಫ್ಘಾನಿಸ್ತಾನವನ್ನು ಬಯಸಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.