ಜೈಲಿನಲ್ಲಿರುವ ಕೈದಿಗಳಿಗೆ 'ಧ್ಯಾನ' ಪಾಠ ಆರಂಭಿಸುವ ಬಗ್ಗೆ ಬಾಂಗ್ಲಾದೇಶ ಮುಂದಾಗಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ತಿಹಾರ್ ಜೈಲಿನಲ್ಲಿಯೂ ಈ ರೀತಿ ಕಾರ್ಯಕ್ರಮ ನಡೆಸಿರುವುದು ನಮಗೆ ಪ್ರೇರಣೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಜೈಲು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಅನುಭವದ ಪ್ರಕಾರ, ಕೆಲವು ಜನರು ತಾವು ಈ ಹಿಂದೆ ಮಾಡಿದ ತಪ್ಪಿನಿಂದಾಗಿಯೇ ಮತ್ತೆ, ಮತ್ತೆ ಜೈಲು ಸೇರುತ್ತಿರುವುದನ್ನು ಗಮನಿಸಿದ್ದೇನೆ. ಹಾಗಾಗಿ ಅಂತಹವರಿಗೆ ನಿಜಕ್ಕೂ ಧಾರ್ಮಿಕ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಪಾಠದ ಅಗತ್ಯವಿದೆ ಎಂದು ಜೈಲು ಅಧಿಕಾರಿ ಮೊಹಮ್ಮದ್ ಅಶ್ರಫುಲ್ ಇಸ್ಲಾಮ್ ಖಾನ್ ಪಿಟಿಐಗೆ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಧ್ಯಾನದ ಪಾಠ ಮಾಡುವುದು ಹೆಚ್ಚಿನ ಪರಿಣಾಮ ಬೀರಲಿದೆ. ಇದೇ ರೀತಿ ಈಗಾಗಲೇ ಭಾರತದ ತಿಹಾರ್ ಜೈಲು ಮತ್ತು ಶ್ರೀಲಂಕಾದ ಜೈಲಿನಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ ಎಂದರು. ಇದೀಗ ಬಾಂಗ್ಲಾದೇಶದ ಜೈಲಿನಲ್ಲಿರುವ ಕೈದಿಗಳು ಧ್ಯಾನ ಪಾಠ ನಡೆಸಲಾಗುವುದು ಎಂದರು.
ದೇಶದಲ್ಲಿನ ಮೆಡಿಟೆಷನ್ ಸ್ಕೂಲ್ ಜೈಲಿನಲ್ಲಿರುವ ಕೈದಿಗಳಿಗೆ ಸುಮಾರು ಹತ್ತು ದಿನಗಳ ವಿಶೇಷ ಧ್ಯಾನ ಪಾಠವನ್ನು ಉಚಿತವಾಗಿ ನೀಡಲು ಮುಂದೆ ಬಂದಿರುವುದಾಗಿ ಖಾನ್ ತಿಳಿಸಿದರು.