ಈದ್ ಉಲ್ ಅಜಾಹ್ ಸಂದರ್ಭದಲ್ಲಿ ಕುಗ್ರಾಮ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ದೇಶಾದ್ಯಂತ ಮಸೀದಿ, ದರ್ಗಾಗಳ ಮೇಲೆ ದಾಳಿ ನಡೆಸಲು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯ ನಡೆಸುವ ಸಂಚು ರೂಪಿಸಿರುವುದಾಗಿ ಮೂಲವೊಂದು ತಿಳಿಸಿದೆ.
ನಿಷೇಧಿತ ಭಯೋತ್ಪಾದನೆ ಸಂಘಟನೆಯಿಂದ ತಲೆಮರೆಸಿಕೊಂಡಿರುವ ಉಗ್ರರು ಮುಖ್ಯವಾಗಿ ಮಸೀದಿ, ದರ್ಗಾಗಳನ್ನು ಗುರಿಯಾಗಿರಿಸಿ ದಾಳಿ ನಡೆಸುವ ಸಂಚಿನ ಕುರಿತು ಇತ್ತೀಚೆಗೆ ಟಿಟಿಪಿ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರವಾಗಿದೆ ಎಂದು ಗುಪ್ತಚರ ಇಲಾಖೆಯ ಮೂಲವೊಂದು ತಿಳಿಸಿದೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.
ನಗರ ಮತ್ತು ಪಟ್ಟಣ ಹೊರತುಪಡಿಸಿ, ಕುಗ್ರಾಮ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಮಸೀದಿ, ದರ್ಗಾಗಳನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲು ತಾಲಿಬಾನ್ ಯೋಜನೆ ರೂಪಿಸಿದೆ. ಈದ್ ಉಲ್ ಅಜಾಹ್ ಪ್ರಾರ್ಥನೆ ವೇಳೆಯಲ್ಲಿಯೇ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.