ಪಾಕಿಸ್ತಾನದ ಕರಾಚಿ ನಗರದ ವಿವಿಧೆಡೆ ನಡೆದ ಪ್ರತ್ಯೇಕ ಶೂಟೌಟ್ ಪ್ರಕರಣದಲ್ಲಿ 12 ಮಂದಿ ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಕಾರ್ಚಾ ಮಂಡಿ, ಕೆಮಾರಿ, ಗುಲಿಸ್ತಾನ್ ಐ ಜೋಹಾರ್ ಮತ್ತು ಬಾಲ್ಡಿಯಾ ಪ್ರದೇಶಗಳಲ್ಲಿ ಪತ್ತೆಯಾದ ಮೃತದೇಹದ ಮೇಲೆ ಗಾಯದ ಕಲೆಗಳು ಕಂಡು ಬಂದಿರುವುದಾಗಿ ಜಿಯೋ ಟಿವಿ ವರದಿ ಹೇಳಿದೆ.
ಮಂಗಳವಾರ ರಾತ್ರಿ ಮುಜಾಹಿಸ್ ಕಾಲೋನಿಯಲ್ಲಿ ವಿರೋಧಿ ಗುಂಪುಗಳ ನಡುವೆ ನಡೆದ ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಫಯ್ಯಾಜ್ ಲೆಗಾರಿ ತಿಳಿಸಿದ್ದಾರೆ.
ಮುತ್ತಾಹಿದಾ ಖ್ವಾಮಿ ಮೂವ್ಮೆಂಟ್ ಮತ್ತು ಅವಾಮಿ ನ್ಯಾಷನಲ್ ಪಾರ್ಟಿಯ ದ್ವೇಷದ ಘರ್ಷಣೆಯಲ್ಲಿ ಈಗಾಗಲೇ ಸುಮಾರು ಎರಡು ಸಾವಿರ ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿ ವಿವರಿಸಿದೆ.