ಸರ್ವಾಧಿಕಾರಿ ಧೋರಣೆ ಕೊನೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲು ಹೋರಾಡಿ ಸೂಕಿ ಜೈಲು ಸೇರಿದ್ದರೆ, ಇತ್ತೀಚೆಗಷ್ಟೇ ನಡೆದಿದ್ದ ಚುನಾವಣೆಯಲ್ಲಿ ಮಿಲಿಟರಿ ಆಡಳಿತ ಜುಂಟಾ ಪರ ಯೂನಿಯನ್ ಸಾಲಿಡ್ಯಾರಿಟಿ ಆಂಡ್ ಡೆವಲಪ್‌ಮೆಂಟ್ ಪಾರ್ಟಿಗೆ ಜಯ ದೊರೆತಿದೆ.
ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ ಮತ್ತೆ ಮಿಲಿಟರಿ ಆಡಳಿತ ಮುಂದುವರಿಯಲಿದ್ದು ಸರ್ವಾಧಿಕಾರಿ ಧೋರಣೆ ಕಾಯಂ ಆಗಲಿದೆ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ 1990ಕ ನಂತರ ಅಂದರೆ ಸುಮಾರು 20 ವರ್ಷಗಳ ನಂತರ ಪ್ರಥಮ ಬಾರಿಗೆ ಭಾನುವಾರ ಚುನಾವಣೆ ನಡೆದಿತ್ತು.
ಚುನಾವಣೆಯಲ್ಲಿ ಯುಎಸ್‌ಡಿಪಿಗೆ ಬಹುಮತ ಬಂದಿದೆ. ಹಾಗಾಗಿ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಿಲಿಟರಿ ಆಡಳಿತ ಮುಂದುವರಿಯಲಿದೆ. ಏತನ್ಮಧ್ಯೆ, ಆಡಳಿತಾರೂಢ ಜುಂಟಾ ಚುನಾವಣೆಯಲ್ಲಿ ಸಾಕಷ್ಟು ಮೋಸ ನಡೆಸಿರುವುದಾಗಿ ಪ್ರತಿಪಕ್ಷಗಳು ಗಂಭೀರವಾಗಿ ಆರೋಪಿಸಿವೆ.