ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ರಿಪಬ್ಲಿಕನ್ ಪಕ್ಷದ ಲೀಡರ್ ಸಾರಾ ಪಾಲಿನ್ ವಿರುದ್ಧ ಇದೀಗ ಬಹುತೇಕ ಅಮೆರಿಕನ್‌ರು ವಿರೋಧ ವ್ಯಕ್ತಪಡಿಸುವ ಮೂಲಕ ಜನಪ್ರಿಯತೆ ಕಳೆದುಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಸಂದರ್ಭದಲ್ಲಿ ಸಾಕಷ್ಟ ಜನಮನ್ನಣೆ ಗಳಿಸಿದ್ದ ಸಾರಾ ಇದೀಗ ಶೇ.52ರಷ್ಟು ಜನಪ್ರಿಯತೆ ಕಳೆದುಕೊಂಡಿರುವುದಾಗಿ ನೂತನ ಸಮೀಕ್ಷೆಯೊಂದು ತಿಳಿಸಿದೆ.
ಅಲಾಸ್ಕಾದ ಮಾಜಿ ಗವರ್ನರ್ ಸಾರಾ ಪಾಲಿನ್ ವಿರುದ್ಧ ಅಮೆರಿಕದ ಬಹುತೇಕ ಪ್ರಜೆಗಳು ಋಣಾತ್ಮಕ ದೃಷ್ಟಿಕೋನ ಹೊಂದಿದ್ದಾರೆ ಎಂದು ಗಾಲ್ಲುಪ್ ಸಂಶೋಧನಾ ಸಂಸ್ಥೆ ನಡೆಸಿದ ನೂತನ ಸಮೀಕ್ಷೆಯಲ್ಲಿ ಹೇಳಿದೆ. 2008ರಲ್ಲಿ ನಡೆದ ಉಪಾಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹುರಿಯಾಳಾಗಿ ಕಣಕ್ಕಿಳಿದ ಸಂದರ್ಭಕ್ಕಿಂತ ಈ ಬಾರಿ ಸಾರಾ ಮತ್ತಷ್ಟು ಜನಪ್ರಿಯತೆ ಕಳೆದುಕೊಂಡಿರುವುದಾಗಿ ವಿವರಿಸಿದೆ.