ಇಸ್ಲಾಮಾಬಾದ್, ಭಾನುವಾರ, 14 ನವೆಂಬರ್ 2010( 11:53 IST )
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿರುವ ಹಿಂದೆ ಭಾರಿ ಕುತಂತ್ರ ಅಡಗಿದೆ ಎಂದು ಜಮಾತ್ ಉದ್ ದಾವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ಆರೋಪಿಸಿದ್ದಾನೆ.
ಚೀನಾ ವಿರುದ್ಧ ಭಾರತವನ್ನು ಎತ್ತಿಕಟ್ಟುವ ಹಾಗೂ ಭಾರತ ಮತ್ತು ಪಾಕ್ ಮಧ್ಯ ಮೂಗು ತೂರಿಸುವ ಹುನ್ನಾರವೇ ಭೇಟಿಯ ಹಿಂದಿನ ಉದ್ದೇಶ ಎಂದು ಹಫೀಜ್ ಕಿಡಿಕಾರಿದ್ದಾನೆ.
ಆದರೆ ಭಾರತ ಎಂದಿಗೂ ಚೀನಾ ವಿರುದ್ಧ ಬಂಡೇಳುವ ಧೈರ್ಯ ತೋರುವುದಿಲ್ಲ. ಇದನ್ನು ಅಮೆರಿಕ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾನೆ. ಅದೇ ರೀತಿ ಪಾಕಿಸ್ತಾನ ಮತ್ತು ಭಾರತ ನಡುವಿನ ಸಮರದಲ್ಲಿ ಮಧ್ಯಸ್ಥಿಕೆ ವಹಿಸದೆ ಸುಮ್ಮನಿರಬೇಕು. ಇಲ್ಲದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ.