'ಒಂದಲ್ಲ ಒಂದು ದಿನ ಬರ್ಮಾದ ಜನರು ಪ್ರಜಾಪ್ರಭುತ್ವ ಆಡಳಿತವನ್ನು ಕಾಣಲಿದ್ದಾರೆ. ನ್ಯಾಯ ಪಡೆಯುವುದು ಯಾವತ್ತಿಗೂ ಸ್ವಲ್ಪ ಕಠಿಣವಾದ ಕೆಲಸವೇ ಆಗಿದೆ' ಎಂದು ಆಸ್ಟ್ರೇಲಿಯ ಪ್ರಧಾನಿ ಜುಲಿಯಾ ಗಿಲ್ಲಾರ್ಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸ್ಯಾನ್ ಸೂಕಿಯನ್ನು ಮ್ಯಾನ್ಮಾರ್ ಸರಕಾರ ಬಂಧಮುಕ್ತಗೊಳಿಸಿರುವುದನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸೂಕಿ ಬಂಧಮುಕ್ತಗೊಂಡಿರುವುದಕ್ಕೆ ಆಸ್ಟ್ರೇಲಿಯಾದ ಜನರು ಮತ್ತು ಸರಕಾರ ಕೂಡ ಸಂತಸ ವ್ಯಕ್ತಪಡಿಸುವುದಾಗಿ ಹೇಳಿದರು. ಸಂಸತ್ತಿನಲ್ಲಿ ಈ ಸಂದೇಶವನ್ನು ವಾಚಿಸಿದ ಪ್ರಧಾನಿ, ಅದನ್ನು ಸೂಕಿ ಅವರಿಗೆ ರವಾನಿಸಿದ್ದಾರೆ.
ಮ್ಯಾನ್ಮಾರ್ ಜನರಿಗೆ ಪ್ರಜಾಪ್ರಭುತ್ವ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಸೂಕಿ ಅವರ ನಿಲುವ ಆಸ್ಟ್ರೇಲಿಯಾಕ್ಕೂ ಪ್ರಭಾವಕ್ಕೊಳಪಡಿಸಿದೆ ಎಂದು ಹೇಳಿದರು.