22ರ ಹರೆಯದ ಮಗನೇ ತನ್ನ ಸ್ವಂತ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಲು ಯತ್ನಿಸಿ, ಆಕೆಯ ಎರಡೂ ಕಣ್ಣುಗಳನ್ನು ಕಿತ್ತು ಹಾಕಿರುವ ಭೀಕರ ಘಟನೆ ಬ್ರಿಟನ್ನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
53ರ ಹರೆಯದ ತಾಯಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿ, ತಾಯಿಯ ಕಣ್ಣನ್ನೇ ಕಿತ್ತು ಹಾಕಿರುವ ಕಾಮುಕ ಪುತ್ರನನ್ನು ಮನೆಯಿಂದ ನಗ್ನನಾಗಿ ಕಾಲುಕಿತ್ತು ಚಲಿಸುತ್ತಿರುವ ಕಾರಿನ ಮೇಲೆ ಹಾರಿದ ಸಂದರ್ಭದಲ್ಲಿ ಸೆರೆ ಹಿಡಿದಿರುವುದಾಗಿ ಡೈಲಿ ಮೇಲ್ ವರದಿ ವಿವರಿಸಿದೆ.
ತಾಯಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ 22ರ ಹರೆಯದ ಪುತ್ರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆತನೂ ಕೂಡ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಥೇಮ್ಸ್ ವ್ಯಾಲಿ ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಇಂಡಿಪೆಂಡೆಂಟ್ ಪೊಲೀಸ್ ಕಂಪ್ಲೈಟ್ಸ್ ಕಮಿಷನ್ ತನಿಖೆಯನ್ನು ನಡೆಸುತ್ತಿದೆ.