ಬ್ಯೂನಸ್ ಐರಿಸ್, ಮಂಗಳವಾರ, 16 ನವೆಂಬರ್ 2010( 12:01 IST )
ಕಳೆದ ಹತ್ತು ವರ್ಷಗಳಿಂದ ಸತತವಾಗಿ ತನ್ನ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ನಡೆದಿದ್ದು, ಆಕೆಗೆ ಐದು ಮಕ್ಕಳಿರುವುದಾಗಿಯೂ ವರದಿಯೊಂದು ತಿಳಿಸಿದೆ.
ತಂದೆ ಅತ್ಯಾಚಾರ ನಡೆಸಿರುವ ಬಗ್ಗೆ 23ರ ಹರೆಯದ ಪುತ್ರಿ ಇದೀಗ ಸ್ಯಾಂಟಿಯಾಗೋ ಡೆಲ್ ಎಸ್ಟೇರೋ ಪ್ರಾಂತ್ಯದ ನ್ಯಾಯಾಂಗ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾಳೆ. ಆದರೆ ತಂದೆಯ ಗುರುತು ಮತ್ತು ವಯಸ್ಸನ್ನು ಬಹಿರಂಗಗೊಳಿಸಲಾಗಿಲ್ಲ. ಯಾವುದೇ ಕಾರಣಕ್ಕೂ ಈ ವಿಚಾರವನ್ನು ಬಾಯ್ಬಿಡಬಾರದು, ವಿಷಯ ಹೊರಹಾಕಿದ್ರೆ ತಾಯಿಯನ್ನು ಹತ್ಯೆ ಮಾಡುವುದಾಗಿ ಕಾಮುಕ ಅಪ್ಪ ಮಗಳಿಗೆ ಬೆದರಿಕೆ ಹಾಕಿರುವುದಾಗಿ ನ್ಯಾಯಾಂಗದ ವಕ್ತಾರರೊಬ್ಬರು ವಿವರಿಸಿದ್ದಾರೆ.
ಬ್ಯೂನಸ್ ಐರಿಸ್ನಿಂದ 1,200 ಕಿ.ಮೀ.ದೂರದಲ್ಲಿರುವ ಜುಮೆ ಎಸ್ಕ್ಯೂನಾ ನಗರದಲ್ಲಿರುವ ವಾಸವಾಗಿರುವ ಈ ಕುಟುಂಬ, ಪುತ್ರಿಗೆ 12ರ ಹರೆಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಂದೆ ಅತ್ಯಾಚಾರ ನಡೆಸಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
'ತನ್ನ ತಾಯಿ ಒಂದು ದಿನ ರಾತ್ರಿ ಶಾಲೆಯ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ತಾನು ಮತ್ತು ತಂದೆ ಮಾತ್ರ ಇದ್ದಿದ್ದೇವು. ಅಂದು ತಾನು ನಿದ್ರಿಸಲು ಬೆಡ್ಗೆ ಹೋದಾಗ ತಂದೆ ತನ್ನ ವಿರೋಧವನ್ನು ಲೆಕ್ಕಿಸದೇ ಅತ್ಯಾಚಾರ ಎಸಗಿರುವುದಾಗಿ' ಪುತ್ರಿ ನ್ಯಾಯಾಧೀಶ ಮಿಗ್ಯುಯೆಲ್ ಮೋರೆನೋಗೆ ಮಾಹಿತಿ ನೀಡಿದ್ದಾಳೆ.
ಘಟನೆ ಕುರಿತಂತೆ ತಂದೆ ಮತ್ತು ಮಗಳ ಡಿಎನ್ಎ ಪರೀಕ್ಷೆ ನಡೆಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಆಕೆಗೆ ಈಗಾಗಲೇ ಹತ್ತು ತಿಂಗಳ ಮಗು ಸೇರಿದಂತೆ ಐವರು ಮಕ್ಕಳಿದ್ದಾರೆ. ಈ ಮಕ್ಕಳ ತಂದೆ 'ಅಪ್ಪನೇ' ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್ಎ ಪರೀಕ್ಷೆಗೆ ಆದೇಶಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಗಂಡನ ಕಾಮುಕ ಬುದ್ದಿಗೆ ರೋಸಿ ಹೋದ ಪತ್ನಿ 2004ರಲ್ಲಿ ವಿಚ್ಛೇದನ ಪಡೆದಿದ್ದಳು. ಅಲ್ಲಿಂದ ಈವರೆಗೂ ಮಗಳು ತಂದೆಯ ಸುಪರ್ದಿಯಲ್ಲೇ ವಾಸಿಸುತ್ತಿದ್ದಾಳೆ. ಇದೀಗ ಭಯದಲ್ಲೇ ತಾನು ಈ ವಿಷಯವನ್ನು ಹೊರ ಹಾಕಿರುವುದಾಗಿ ಪುತ್ರಿ ಕೋರ್ಟ್ಗೆ ತಿಳಿಸಿದ್ದಾಳೆ. ಒಂದು ವೇಳೆ ಈ ಆರೋಪ ಸಾಬೀತಾದ್ರೆ ಅಜೈಂಟೀನಾದ ಕಾಮುಕ ಅಪ್ಪ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.