ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಇಸ್ಲಾಮ್ ತತ್ವದ ನಿಜವಾದ ಅನುಯಾಯಿ: ರೆಹಮಾನ್ (Taliban | Islamic ideology | America | terrorist | Pakistan)
Bookmark and Share Feedback Print
 
ತಾಲಿಬಾನ್ ಉಗ್ರಗಾಮಿ ಸಂಘಟನೆ ಇಸ್ಲಾಮ್ ತತ್ವದ ನಿಜವಾದ ಅನುಯಾಯಿಯಾಗಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಬಣ್ಣಿಸಿದ್ದು, ಆ ನಿಟ್ಟಿನಲ್ಲಿ ಅಮೆರಿಕ ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ದೇಶ ಎಂದು ನಂಬುವುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪಾಕ್‌ನ ಪ್ರವಾಸೋದ್ಯಮ ಸಚಿವ ಮೌಲಾನಾ ಅಟ್ಟೌರ್ ರೆಹಮಾನ್, ಉಲೇಮಾ ಮತ್ತು ತಾಲಿಬಾನ್ ಇಸ್ಲಾಮ್‌ ತತ್ವದ ನಿಜವಾದ ಅನುಯಾಯಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಂಗಳವಾರ ಖೈಬೆರ್ ಪಾಖ್ತುನ್‌ಖಾವಾದ ಅಲ್ಲೈ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ಮತ್ತು ಜಗತ್ತಿನ ಇತರೆಡೆ ಮುಸ್ಲಿಮರಿಗೆ ಸಮಾನ ಹಕ್ಕು ಮತ್ತು ಗೌರವ ದೊರೆಯುವವರೆಗೂ ಭಯೋತ್ಪಾದನೆಯ ಹೋರಾಟ ನಿಲ್ಲದು ಎಂದು ಈ ಸಂದರ್ಭದಲ್ಲಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಅಮೆರಿಕ ವಿಶ್ವದಾದ್ಯಂತ ಆಂತರಿಕ ಸೌಹಾರ್ದತೆಯ ನಂಬಿಕೆಯ ವಿರುದ್ಧ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ರೆಹಮಾನ್, ಅಮೆರಿಕ ಜಗತ್ತಿನ ದೊಡ್ಡ ಭಯೋತ್ಪಾದಕ ಶಕ್ತಿಯಾಗಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ