ಪಾಕ್: ವಿಚಾರಣೆ ಮುಂದಕ್ಕೆ
ಪಾಕಿಸ್ತಾನ ಅಧ್ಯಕ್ಷ ಅಲಿಫ್ ಅಲಿ ಜರ್ದಾರಿ ಎರಡೆರಡು ಹುದ್ದೆ ನಿರ್ವಹಿಸುತ್ತಿರುವ ಬಗ್ಗೆ ದಾಖಲಾದ ಅರ್ಜಿಯ ವಿಚಾರಣೆಯನ್ನು ಪಾಕಿಸ್ತಾನದ ಸಿಂಧ್ ಮತ್ತು ಲಾಹೋರ್ ಹೈಕೋರ್ಟ್ ಮುಂದಕ್ಕೆ ಹಾಕಿದೆ. ಜರ್ದಾರಿ ಅವರು ಆಡಳಿತಾರೂಢ ಪಿಪಿಪಿ ಅಧ್ಯಕ್ಷರಾಗಿಯೂ ಹಾಗೂ ದೇಶದ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ. ಇದನ್ನು ಪ್ರಶ್ನಿಸಿ ದೂರು ಸಲ್ಲಿಸಲಾಗಿದೆ.