ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಚಿವ ಮಲಿಕ್‌ಗೆ ಹತ್ಯೆ ಬೆದರಿಕೆ; ಪಾಕ್ ವ್ಯಕ್ತಿ ಬಂಧನ (Pakistan | Islamabad | Rehman Malik | police | Man arrest)
Bookmark and Share Feedback Print
 
ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಹಾಗೂ ಮನೆ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪಾಕಿಸ್ತಾನ ಪೊಲೀಸರು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ನಿವಾಸಿ ತಾಹಿರ್ ರಾಶೀದ್ ಎಂಬಾತನನ್ನು ಇಸ್ಲಾಮಾಬಾದ್ ಪೊಲೀಸ್ ತಂಡ ಬಂಧಿಸಿದೆ. ಸಚಿವ ಮಲಿಕ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಆಂತರಿಕ ಸಚಿವಾಲಯಕ್ಕೆ ಬೆದರಿಕೆ ಕರೆ ಮಾಡಿದ್ದ.

ಕರೆ ಜಾಡನ್ನು ಹಿಡಿದ ಪೊಲೀಸರು ಇದೀಗ ರಾಶೀದ್‌ನನ್ನು ಸೆರೆ ಹಿಡಿದಿದ್ದು, ಆತನ ವಿರುದ್ಧ ಟೆಲಿಗ್ರಾಫ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ. ರಾಶೀದ್‌ನನ್ನು ವಿಶೇಷ ಪೊಲೀಸ್ ತಂಡ ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ