ತನ್ನ ಸಂಪುಟದಿಂದ ಹೊರ ಹಾಕಿದರೆ ಸರಕಾರವನ್ನು ಉರುಳಿಸುವುದಾಗಿ ರಹಸ್ಯ ಹೇಳಿದ್ದ ಹೇಳಿಕೆಗೆ ಬ್ರಿಟನ್ ಸಚಿವರೊಬ್ಬರು ಮಂಗಳವಾರ ಕ್ಷಮಾಪಣೆ ಕೇಳಿದ್ದಾರೆ.
ಬ್ರಿಟನ್‌ನ ಸಚಿವ ವಿನ್ಸೆ ಕಾಬೆ ಅವರನ್ನು ಡೈಲಿ ಟೆಲಿಗ್ರಾಫ್ ಪತ್ರಕರ್ತರು ಮಾರುವೇಷದಲ್ಲಿ ಸಂದರ್ಶನ ನಡೆಸಿದ ಸಂದರ್ಭದಲ್ಲಿ, ಬ್ರಿಟನ್ ಸರಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದ್ದರು. ನನ್ನ ಬಳಿ ನ್ಯೂಕ್ಲಿಯರ್ ಆಯುಧ ಇದೆ. ಹಾಗಾಗಿ ಒಂದು ವೇಳೆ ನನ್ನನ್ನು ಹೊರಹಾಕಿದೆ. ನಾನು ಸರಕಾರವನ್ನು ಬೀಳಿಸುವುದು ಖಚಿತ ಎಂದು ಹೇಳಿರುವುದಾಗಿ ವರದಿ ಬಹಿರಂಗಪಡಿಸಿತ್ತು.
ಈ ವಿಷಯ ದೇಶಾದ್ಯಂತ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ನಂತರ ತಾನು ಆ ರೀತಿ ಹೇಳಿರುವುದಕ್ಕೆ ಕ್ಷಮೆಯಾಚಿಸುವುದಾಗಿ ಕಾಬೆ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.