ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೆಡ್ಲಿ ಐಎಸ್ಐ ಪರ ಗೂಢಚಾರಿಕೆ ಕೆಲಸ ಮಾಡಿದ್ದ:ತನಿಖಾ ವರದಿ (ISI | Headley | Ahmed Shuja Pash | LeT | Pakistan)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿಯ ರೂವಾರಿಯಾಗಿರುವ ಲಷ್ಕರ್ ಇ ತೊಯ್ಬಾದ ಉಗ್ರ ಡೇವಿಡ್ ಹೆಡ್ಲಿ ಪಾಕಿಸ್ತಾನದ ಐಎಸ್ಐ ಪರವಾಗಿ ಗೂಢಚಾರಿಕೆ ಕೆಲಸ ಮಾಡುತ್ತಿದ್ದ. ಅಲ್ಲದೇ ಭಾರತದ ಮೇಲಿನ ದಾಳಿ ಸಂಚಿನ ಬಗ್ಗೆ ಐಎಸ್ಐ ವರಿಷ್ಠ ಅಹ್ಮದ್ ಶೂಜಾ ಪಾಷಾಗೂ ತಿಳಿದಿರುವ ಸಾಧ್ಯತೆ ಇದೆ ಎಂದು ತನಿಖಾ ವರದಿಯೊಂದು ತಿಳಿಸಿದೆ.

ಹೆಡ್ಲಿ ದೊಡ್ಡ ಭಯೋತ್ಪಾದಕ. ಅಷ್ಟೇ ಅಲ್ಲ ಆತ ಪಾಕಿಸ್ತಾನದ ಗೂಢಚಾರನಾಗಿ ಕಾರ್ಯನಿರ್ವಹಿಸಿದ್ದ ಎಂದು ಅಮೆರಿಕ ಮತ್ತು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಮೆರಿಕದ ತನಿಖಾ ವರದಿ ಪತ್ರಕರ್ತ ಸೆಬಾಸ್ಟಿಯನ್ ರೋಟೆಲ್ಲಾ ಪ್ರೊಪಬ್ಲಿಕನ್ ಡಾಟ್ ಕಾಮ್‌ನಲ್ಲಿ ಬರೆದಿದ್ದಾರೆ.

ಅಮೆರಿಕ ಮತ್ತು ಭಾರತೀಯ ತನಿಖಾ ತಂಡಗಳ ವಿಚಾರಣೆ ನಂತರ ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ಐ ಯಾವ ರೀತಿಯಲ್ಲಿ ಡಬಲ್ ಗೇಮ್ ನಡೆಸಿದೆ ಎಂಬುದನ್ನು ಈ ತನಿಖಾ ವರದಿ ವಿವರಿಸಿದೆ. ಐಎಸ್ಐನ ಪ್ರಮುಖರು ಲಷ್ಕರು ಇ ತೊಯ್ಬಾ ಉಗ್ರಗಾಮಿ ಸಂಘಟನೆ ಜತೆ ಶಾಮೀಲಾಗಿ ಮುಂಬೈ ದಾಳಿ ಸಂಚು ನಡೆಸಿ 166 ಜನರ ಹತ್ಯೆಗೆ ಕಾರಣವಾಗಿದೆ ಎಂದು ಸೆಬಾಸ್ಟಿಯನ್ ವಿವರಿಸಿದ್ದಾರೆ.

ಡೇವಿಡ್ ಹೆಡ್ಲಿಯನ್ನು ಐಎಸ್ಐ ಅಧಿಕಾರಿಗಳು ನೇಮಕಮಾಡಿಕೊಂಡು ಆತನನ್ನು ಗುಪ್ತಚಾರ ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು. ಅವನಿಗೆ ಹಣಕಾಸಿನ ನೆರವು ನೀಡಿ ಮುಂಬೈ ಮತ್ತು ಇತರೆಡೆ ದಾಳಿ ನಡೆಸಲು ಸೂಚನೆ ನೀಡಿರುವುದಾಗಿ ಅವರು ಡಾಟ್ ಕಾಮ್‌ನಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ