ಬ್ರೆಜಿಲ್‌ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ದಿಲ್ಮಾ ರೂಸ್ಸೆಫ್ ಅಧಿಕಾರ ಸ್ವೀಕರಿಸುವ ಮೂಲಕ ಲ್ಯಾಟಿನ್ ಅಮೆರಿಕದ ಬೃಹತ್ ಆರ್ಥಿಕ ಸ್ಥಿತಿಯನ್ನು ಹತೋಟಿಗೆ ತರುವ ಪಣ ತೊಟ್ಟಿದ್ದಾರೆ.
63ರ ಹರೆಯದ ರೂಸ್ಸೆಫ್ ಖ್ಯಾತ ಆರ್ಥಿಕ ತಜ್ಞೆ ಮತ್ತು ಲೂಲಾಸ್ ಕ್ಯಾಬಿನೆಟ್‌ನ ಮಾಜಿ ವರಿಷ್ಠೆ ಇದೀಗ ಬ್ರೆಜಿಲ್‌ನ ಮೊದಲ ಮಹಿಳೆ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ರೆಜಿಲ್‌ನ ಜನಪ್ರಿಯ ಮಾಜಿ ಅಧ್ಯಕ್ಷ ಲೂಜ್ ಇನಾಸಿಯೋ ಲೂಲಾ ಡಾ ಸಿಲ್ವಾ ಅವರಿಂದ ಅಧಿಕಾರ ಸ್ವೀಕರಿಸಿದರು.
ಡಿಲ್ಮಾ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಸುಮಾರು 70 ಸಾವಿರ ಮಂದಿ ವೀಕ್ಷಿಸಿದ್ದು, ದೇಶದ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿರುವುದನ್ನು ದೇಶದ ಜನರು ಹಾರ್ದಿಕವಾಗಿ ಸ್ವಾಗತಿಸಿದರು.
ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಜವಾಬ್ದಾರಿ ತನ್ನದು ಎಂದು ಅಧಿಕಾರ ಸ್ವೀಕರಿಸಿದ ನಂತರ ಡಿಲ್ಮಾ ಸುದ್ದಿಗಾರರ ಜತೆ ಮಾತನಾಡುತ್ತ ವಿಶ್ವಾಸ ವ್ಯಕ್ತಪಡಿಸಿದರು. ಇದು ತನ್ನ ಮುಂದಿರುವ ಬಹುದೊಡ್ಡ ಸವಾಲು ಕೂಡ ಆಗಿದೆ ಎಂದು ಹೇಳಿದರು.