ಕಳೆದ ಒಂದು ದಶಕಗಳಲ್ಲಿ ಬ್ರಿಟನ್‌ನಲ್ಲಿ ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಮ್‌ಗೆ ಮತಾಂತರಗೊಳ್ಳುತ್ತಿರುವವರ ಸಂಖ್ಯೆ ಅಧಿಕಗೊಂಡಿದೆಯಂತೆ. ಅಷ್ಟೇ ಅಲ್ಲ ಇತ್ತೀಚೆಗೆ ಇಸ್ಲಾಮ್ ಫೋಬಿಯಾ ಕೂಡ ಹೆಚ್ಚಳವಾಗಿರುವುದಾಗಿ ಇಂಟರ್ ಫೈಥ್ ಥಿಂಕ್ ಟ್ಯಾಂಕ್ ಸ್ಟಡಿ ತಿಳಿಸಿದೆ.
ಈ ಹಿಂದಿನ ಅಂದಾಜಿನ ಪ್ರಕಾರ ಬ್ರಿಟನ್‌ನಲ್ಲಿ 14,000ದಿಂದ 25000 ಮಂದಿ ಇಸ್ಲಾಮ್‌ಗೆ ಮತಾಂತರವಾಗಿದ್ದಾರೆ ಎನ್ನಲಾಗಿತ್ತು. ಆದರೆ ಥಿಂಕ್ ಟ್ಯಾಂಕ್ ಅಧ್ಯಯನದ ಪ್ರಕಾರ ಆ ಸಂಖ್ಯೆ 100,000 ಎಂದು ಹೇಳಿದೆ. ಅದೇ ರೀತಿ ಪ್ರತಿ ವರ್ಷ 5000 ಮಂದಿ ನೂತನವಾಗಿ ಮತಾಂತರಗೊಳ್ಳುತ್ತಿರುವುದಾಗಿ ವಿವರಿಸಿದೆ.
ಸೆಪ್ಟೆಂಬರ್ 11 ಮತ್ತು ಲಂಡನ್‌ನ ಜುಲೈ 7 ದಾಳಿಯ ನಂತರ ಬ್ರಿಟನ್‌ನಾದ್ಯಂತ ಇಸ್ಲಾಮ್‌ಗೆ ಮತಾಂತರಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಏನೇ ಆದರೂ ನಿಜವಾದ ಅಂಕಿ-ಅಂಶ ಬಹಿರಂಗವಾಗುವ ಮೂಲಕ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗುವವರ ಮೇಲೆ ಯಾವುದೇ ದುಷ್ಟರಿಣಾಮ ಬೀಳುವುದಿಲ್ಲ ಎಂದು ಹೇಳಿದೆ.